More

    ದೇವಸ್ಥಾನ ಪ್ರಸಾದ ಸೇವಿಸಿ 300 ಮಂದಿ ಅಸ್ವಸ್ಥ: ರೋಗಿಗಳಿಗೆ ರಸ್ತೆಯಲ್ಲೇ ಚಿಕಿತ್ಸೆ!

    ಮಹಾರಾಷ್ಟ್ರ: ದೇವಸ್ಥಾನ ಪ್ರಸಾದ ಸೇವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದೆ. ಬೆಡ್‌ಗಳ ಕೊರತೆಯಿಂದಾಗಿ ಆಸ್ಪತ್ರೆಯ ಹೊರಗೆ ಹಲವಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದು, ಸಲೈನ್ ಬಾಟಲಿಗಳನ್ನು ಮರಗಳಿಗೆ ಕೊಕ್ಕೆಯಿಂದ ನೇತುಹಾಕಲಾದ ದೃಶ್ಯಗಳು ಮನಕಲುಕುವಂತಿತ್ತು.

    ಇದನ್ನೂ ಓದಿ:ರಣಜಿ ಟ್ರೋಫಿ ಗೆದ್ದರೆ 1 ಕೋಟಿ ರೂ., ಬಿಎಂಡ್ಲ್ಯೂ ಕಾರು: ಜಗನ್ ಮೋಹನ್ ರಾವ್

    ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದ ಧಾರ್ಮಿಕ ಕಾರ್ಯಕ್ರಮವಾದ ‘ಹರಿಣಂ ಸಪ್ತಾಹ’ದ ಕೊನೆಯ ದಿನ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಬುಲ್ಧಾನ ಜಿಲ್ಲಾಧಿಕಾರಿ ಕಿರಣ್ ಪಾಟೀಲ್ ಸುದ್ದಿ ಸಂಸ್ಥೆ ತಿಳಿಸಿದ್ದಾರೆ.

    ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತಾಧಿಗಳು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ನಂತರ ಪ್ರಸಾದ ಸೇವಿಸಿದ್ದಾರೆ. ಪ್ರಸಾದ ಸೇವಿಸಿದ ಸ್ವಲ್ಪ ಸಮಯದ ನಂತರ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಬಂದು ಅಸ್ವಸ್ಥರಾಗಿದ್ದಾರೆ.

    ಅಸ್ವಸ್ಥರಾದ ಜನರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ರವಾನಿಸಲಾಯಿತು. ಈ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ಕಾಂಪೌಂಡ್​ನಲ್ಲಿ ಚಿಕಿತ್ಸೆ ನೀಡಲಾಯಿತು. ಮರದ ಕೋಲುಗಳನ್ನು ನಿಲ್ಲಿಸಿ ಅದಕ್ಕೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಸಲೈನ್ ಬಾಟಲಿ ನೇತಾಕಿ ಚಿಕಿತ್ಸೆ ನೀಡಿಲಾಗಿದೆ. ಈ ಫೋಟೋಗಳು ಎಲ್ಲಡೆ ವೈರಲ್​ ಆಗಿದೆ.

    ಇದು ಸೋಮಠಾಣಾದಲ್ಲಿ ಧಾರ್ಮಿಕ ಕಾರ್ಯಕ್ರಮದ ಆರನೇ ದಿನವಾಗಿತ್ತು. 400 ರಿಂದ 500 ಜನರಿಗೆ ‘ಏಕಾದಶಿ’ (ಹನ್ನೊಂದನೇ ದಿನ) ಎಂದು ‘ಪ್ರಸಾದ’ ವಿತರಿಸಲಾಗಿದೆ. ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದ 300 ಕ್ಕೂ ಹೆಚ್ಚು ಭಕ್ತಾಧಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಬಹುತೇಕರು ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಾಟೀಲ್ ತಿಳಿಸಿದ್ದಾರೆ.

    ಬೆಡ್‌ಗಳ ಕೊರತೆಯಿಂದಾಗಿ ಆಸ್ಪತ್ರೆಯ ಹೊರಗೆ ಹಲವಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದು, ಸಲೈನ್ ಬಾಟಲಿಗಳನ್ನು ಮರಗಳಿಗೆ ಕೊಕ್ಕೆಯಿಂದ ನೇತುಹಾಕಲಾದ ದೃಶ್ಯಗಳು ಮನಕಲುಕುವಂತಿತ್ತು.

    ದುಬೈ ಜೈಲಿನಿಂದ ಬಿಡುಗಡೆ: 18 ವರ್ಷಗಳ ನಂತರ ತವರಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts