ಕೆವಿಎನ್ ಪ್ರೊಡಕ್ಷನ್ ನಡಿ ಬರ್ತಿದೆ ನಿಖಿಲ್ ಹೊಸ ಸಿನಿಮಾ! ಶೂಟಿಂಗ್ ಶುರು...

Published on
ನಟ ನಿಖಿಲ್ ಅವರು 'ರೈಡರ್' ಸಿನಿಮಾದ ಸಕ್ಸಸ್ ಖುಷಿಯಲ್ಲಿರುವಾಗಲೇ ಮತ್ತೊಂದು ಹೊಸ ಸಿನಿಮಾದ ಶೂಟಿಂಗ್ ಅರಂಭಿಸಿದ್ದಾರೆ. ಈ ಹೊಸ ಸಿನಿಮಾವನ್ನು ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದು, ಅವರು ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿದ್ದು ಜತೆಗೆ ತಮಿಳಿನ ಕದಿರನ್‌ ಒಟ್ಟಿಗೆ ಸಹ ಕೆಲಸ ಮಾಡಿದ್ದಾರೆ. 'ಮಾಸ್ಟರ್‌ಪೀಸ್‌'', 'ಮಫ್ತಿ' ಸಿನಿಮಾಗಳಿಗೆ ಅಸೋಸಿಯೇಟ್‌ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು.
ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ಪೂರ್ಣ ನಿರ್ದೇಶಕರಾಗಿ ಸಿನಿಮಾರಂಗದಲ್ಲಿ ಅವರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಟ ನಿಖಿಲ್ ಹಾಗೂ ಮಂಜು ಅಥರ್ವ ಕಾಂಬೋದಲ್ಲಿ ಮೂಡಿ ಬತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಈಗಾಗಲೇ ಶುರುವಾಗಿದೆ. ನಟ ನಿಖಿಲ್ ಪಾತ್ರದ ಶೂಟಿಂಗ್ ಈಗ ನಡೆಯುತ್ತಿದ್ದು, ಈ ಬಗ್ಗೆ ಚಿತ್ರತಂಡ ಅಪ್ ಡೇಟ್ ನೀಡಿದೆ.‌ ಪಕ್ಕ ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾವಾಗಿರಲಿದೆಯಂತೆ ಈ ಚಿತ್ರ. ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ.
ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬರ್ತಿರುವ ಈ ಸಿನಿಮಾಗೆ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಪಕರಾಗಿದ್ದಾರೆ. ಸಿನಿಮಾಗೆ ಅಜನೀಶ್ ಲೋಕನಾಥ್‌ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಕ್ಯಾಮೆರಾ ಹ್ಯಾಂಡಲ್ ಮಾಡಲಿದ್ದಾರೆ. ಸದ್ಯಕ್ಕೆ, ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರತಂಡ ಶೀಘ್ರದಲ್ಲೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ಯೂ ನೀಡಲಿದೆಯಂತೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net