'ರೈಡರ್​'ನಲ್ಲಿ ನಿಖಿಲ್​ ಕುಮಾರ್​ ಪಾತ್ರ ಏನು ಗೊತ್ತಾ?

Rider - Final
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್​ ಕುಮಾರ್​, 'ರೈಡರ್​' ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಷಯವೇನೋ ಗೊತ್ತು. ಆದರೆ, ಈ ಚಿತ್ರದಲ್ಲಿ ಅವರ ಪಾತ್ರವೇನು ಗೊತ್ತಾ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಚಿತ್ರದಲ್ಲಿ ನಿಖಿಲ್​, ಬ್ಯಾಸ್ಕೆಟ್​ಬಾಲ್​ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ರೈಡರ್​' ಕ್ರೀಡೆಯನ್ನು ಆಧರಿಸಿದ ಚಿತ್ರವಾಗಿದ್ದು, ನಿಖಿಲ್​ ಇಲ್ಲಿ ಬ್ಯಾಸ್ಕೆಟ್​ಬಾಲ್​ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಷ್ಟೇ ಅಲ್ಲ, ತಮ್ಮ ಪಾತ್ರಕ್ಕಾಗಿ ಅವರು ಮೂರು ತಿಂಗಳ ಕಾಲ ಬ್ಯಾಸ್ಕೆಟ್​ಬಾಲ್​ ಆಟದ ತರಬೇತಿಯನ್ನೂ ಪಡೆದಿದ್ದಾರಂತೆ. ಸಖತ್​ ಆಕ್ಷನ್​ ದೃಶ್ಯಗಳಿರುವ ಈ ಟೀಸರ್​ ಇತ್ತೀಚೆಗೆ ಬಿಡುಗಡೆಯಾಗಿದೆ.

‘ರೈಡರ್​’ ಚಿತ್ರವು ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಹಾಡಿನ ಚಿತ್ರೀಕರಣ ಪ್ರಾರಂಭವಾಲಿದೆ. ಇನ್ನು, ಚಿತ್ರದ ಡಬ್ಬಿಂಗ್​ ಶುರುವಾಗಿದ್ದು, ನಿಖಿಲ್​ ತಮ್ಮ ಕೆಲಸವನ್ನು ಮುಗಿಸಿದ್ದಾರೆ.

ನಿಖಿಲ್​ ಕುಮಾರ್​ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ಅಭಿನಯಿಸಿದ್ದು, ಮಿಕ್ಕಂತೆ ದತ್ತಣ್ಣ, ಅಚ್ಯುತ್​ ಕುಮಾರ್​, ಚಿಕ್ಕಣ್ಣ, ಶಿವರಾಜ್​ ಕೆಆರ್​ ಪೇಟೆ, ರಾಜೇಶ್​ ನಟರಂಗ, ಶೋಭರಾಜ್​ ಮುಂತಾದವರು ನಟಿಸುತ್ತಿದ್ದಾರೆ.

ಚಿತ್ರಕ್ಕೆ ಅರ್ಜುನ್​ ಜನ್ಯ ಅವರ ಸಂಗೀತವಿದ್ದು, ಶ್ರೀಷ ಕೂದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಲಹರಿ ಫಿಲಂಸ್​ನಡಿ ಚಂದ್ರು ಮನೋಹರ್​ ನಿರ್ಮಿಸುತ್ತಿರುವ ಈ ಚಿತ್ರವನ್ನು ತೆಲುಗಿನ ವಿಜಯ್​ಕುಮಾರ್​ ಕೊಂಡ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net