

ಮುಂಬೈ : ಬಾಲಿವುಡ್ ನಟ ಬಾಬಿ ಡಿಯೋಲ್ ಪುತ್ರ ಆರ್ಯಮನ್ ಡಿಯೋಲ್ಗೆ ಇಂದು 20ನೇ ವರ್ಷದ ಹುಟ್ಟಿದಹಬ್ಬದ ಸಡಗರ. ಈ ಸಂದರ್ಭದಲ್ಲಿ ತಮ್ಮ ಪುತ್ರನೊಂದಿಗಿನ ಫೋಟೋವನ್ನು ಬಾಬಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ 13 ಗಂಟೆಗಳಲ್ಲಿ ಸುಮಾರು 1 ಲಕ್ಷ ಲೈಕುಗಳು ಲಭಿಸಿವೆ.
'ಹ್ಯಾಪಿ ಬರ್ತ್ಡೇ ಮೈ ಏಂಜಲ್' ಎಂದು ವಿಶ್ ಮಾಡಿರುವ ಬಾಬಿ ಡಿಯೋಲ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಹಲವಾರು ಸೆಲೆಬ್ರಿಟಿಗಳು ಆರ್ಯಮನ್ಗೆ ಶುಭಾಶಯಗಳ ಮಳೆಗರೆದಿದ್ದಾರೆ. ಹಲವು ಅಭಿಮಾನಿಗಳೂ ಬರ್ತ್ಡೇ ವಿಶ್ ಮಾಡಿದ್ದು, ಆರ್ಯಮನ್ ಆಕರ್ಷಕ ರೂಪ ಹೊಂದಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಕೆಲವರು ಆರ್ಯಮನ್ ತಮ್ಮ ತಾತ ಧರ್ಮೇಂದ್ರರಂತೆ ಕಾಣುತ್ತಾರೆ ಎಂದಿದ್ದಾರೆ. 'ಧರಮ್ ಪಾಜೀ ಯುವಕರಾಗಿದ್ದಾಗ ಇದ್ದ ಸುಂದರ ಮುಖ ಆರ್ಯಮನ್ಗಿದೆ' ಎಂದು ಹೊಗಳಾಡಿದ್ದಾರೆ.
ಬಾಬಿ ಡಿಯೋಲ್ ಮತ್ತು ತಾನ್ಯ ಡಿಯೋಲ್ ಅವರಿಗೆ ಇಬ್ಬರು ಪುತ್ರರು - ಆರ್ಯಮನ್ ಮತ್ತು ಧರಮ್. ಕಳೆದ ಮೇನಲ್ಲಷ್ಟೆ ಬಾಬಿ ತಮ್ಮ ವಿವಾಹದ 25ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಚಲನಚಿತ್ರಗಳಲ್ಲದೆ, ವೆಬ್ ಸೀರಿಸ್ಗಳಲ್ಲೂ ಮಿಂಚುತ್ತಿರುವ ಬಾಬಿ ಡಿಯೋಲ್ರ 'ಆಶ್ರಮ್', ಇತ್ತೀಚೆಗೆ ಭಾರೀ ವೀಕ್ಷಣೆ ಪಡೆದಿತ್ತು. ಇದೀಗ ನೆಟ್ಫ್ಲಿಕ್ಸ್ನ 'ಪೆಂಟ್ಹೌಸ್', 'ಲವ್ ಹಾಸ್ಟೆಲ್' ಮತ್ತು 'ಅನಿಮಲ್' ಎಂಬ ಸೀರಿಸ್ಗಳಲ್ಲಿ ಅವರು ನಟಿಸುತ್ತಿದ್ದಾರೆ. (ಏಜೆನ್ಸೀಸ್)