

ಭೋಪಾಲ್: ನೆಟ್ಫ್ಲಿಕ್ಸ್ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಎ ಸುಟೇಬಲ್ ಬಾಯ್ ಮಿನಿ ವೆಬ್ ಸಿರೀಸ್ ಇದೀಗ ಹಲವು ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಹಿಂದೂಗಳ ಭಾವನಗೆ ದಕ್ಕೆ ತರುವಂತ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ದೂರು ನೀಡಿದೆ.
ಇದನ್ನೂ ಓದಿ: ‘ಆರ್.ಎಕ್ಸ್ 100’ ಗೊತ್ತು, ಈ ‘ಆರ್.ಎಚ್ 100’ ಏನು?
ಭೋಪಾಲ್ನ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಗೌರವ್ ತಿವಾರಿ, ಈ ಸರಣಿಯನ್ನು ಪ್ರಸಾರ ಮಾಡಿದ ನೆಟ್ಪ್ಲಿಕ್ಸ್ ವಿರುದ್ಧ ರೇವಾ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ವೆಬ್ಸಿರೀಸ್ನಲ್ಲಿ ಐತಿಹಾಸಿಕ ನರ್ಮದ ನದಿಯ ತಟದಲ್ಲಿರುವ ಮಹೇಶ್ವರ ದೇವಸ್ಥಾನದ ಮುಂದೆ ಚುಂಬನದ ದೃಶ್ಯವನ್ನು ಸೇರಿಸಲಾಗಿದೆ. ಮುಸ್ಲಿಂ ಯುವಕ, ಹಿಂದೂ ಮಹಿಳೆಯ ಈ ದೃಶ್ಯ ಲವ್ ಜಿಹಾದ್ಗೆ ಪ್ರೇರಣೆ ನೀಡುವಂತಿದೆ. ಈ ಕೂಡಲೇ ಚಿತ್ರದಲ್ಲಿನ ಆ ದೃಶ್ಯವನ್ನು ಕಿತ್ತೆಸೆದು ಕ್ಷಮಾಪಣೆ ಹೇಳಬೇಕೆಂದು ತಿವಾರಿ ದೂರಿನಲ್ಲಿ ನಮೂದಿಸಿದ್ದಾರೆ.
ಇದನ್ನೂ ಓದಿ: ಕಿಯಾರಾಗೆ ಮಿಸ್ ಆದ ಅವಕಾಶ ಆಲಿಯಾಗೆ ಸಿಕ್ತು!
ಮಧ್ಯ ಪ್ರದೇಶದ ಗೃಹ ಮಂತ್ರಿ ನರೋತ್ತಮ್ ಮಿಶ್ರಾ ಈಗಾಗಲೇ ಈ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದು, ನೆಟ್ಫ್ಲಿಕ್ಸ್ನ ಮೋನಿಕಾ ಶೆರ್ಗಿಲ್ ಮತ್ತು ಅಂಬಿಕಾ ಖುರಾನಾ ವಿರುದ್ಧ ದೂರು ಸಹ ದಾಖಲಾಗಿದೆ. ಅಂದಹಾಗೆ ವಿಕ್ರಮ್ ಸೇಟ್ ಬರೆದ ಎ ಸುಟೇಬಲ್ ಬಾಯ್ ಕಾದಂಬರಿಯನ್ನು ಮೀರಾ ನಾಯರ್ ಮತ್ತು ಶಿಮಿತ್ ಅಮಿನ್ ನಿರ್ದೇಶನ ಮಾಡಿದ್ದಾರೆ. ಟಬು, ಇಶಾನ್ ಕಟ್ಟರ್ ಸೇರಿ ಸಾಕಷ್ಟು ಜನ ಕಲಾವಿದರು ನಟಿಸಿದ್ದಾರೆ. (ಏಜೆನ್ಸೀಸ್)