ಅಕ್ಷಯ್​ ಕುಮಾರ್​ಗೂ ಎದುರಾಗಿತ್ತು ನೆಪೋಟಿಸಂ; ಸಿನಿಮಾ ಅವಕಾಶ ಕಿತ್ತುಕೊಂಡಿದ್ದರು ಈ ಸ್ಟಾರ್ ನಟ!

Akshay-Kumar-3_571_855
Published on

ಅಕ್ಷಯ್​ ಕುಮಾರ್​ ಸದ್ಯ ಬಾಲಿವುಡ್​ನ ಮೋಸ್ಟ್​ ಸಕ್ಸಸ್​ಫುಲ್​ ನಟ. ಖಾನ್​ತ್ರಯರನ್ನು ಹಿಂದಿಕ್ಕಿ ಮುಂದಿದ್ದಾರೆ. ಸಾಲು ಸಾಲು ಸಿನಿಮಾ, ಕೋಟಿ ಕೋಟಿ ಗಳಿಕೆ ಹೀಗೆ ಸದ್ಯ ಬಾಲಿವುಡ್​ನ ನಂಬರ್​ ಒನ್​ ನಟ ಎಂದರೂ ತಪ್ಪಿಲ್ಲ. ಹೀಗಿರುವಾಗ ಇಂಥ ನಟನ ಬಾಳಲ್ಲೂ ನೆಪೋಟಿಸಂ ಆಟವಾಡಿತ್ತು ಎಂದರೆ ನೀವು ನಂಬಲೇಬೇಕು!

ಹೌದು, ಅದು 1991 ಫೂಲ್​ ಔರ್​ ಕಾಂತೆ ಅನ್ನೋ ಸಿನಿಮಾಕ್ಕೆ ಅಕ್ಷಯ್​ ಕುಮಾರ್​ ನಾಯಕನಾಗಿ ಆಯ್ಕೆಯಾಗಿದ್ದರು. ಚಿತ್ರದ ಹಾಡಿನ ಸಂಯೋಜನೆಯನ್ನೂ ಮಾಡಲಾಗಿತ್ತು. ಇನ್ನೇನು ಶೂಟಿಂಗ್​ಗೂ ದಿನಾಂಕ ನಿಗದಿಯಾಗಿತ್ತು. ಆ ಖುಷಿಯಲ್ಲಿಯೇ ಅಕ್ಷಯ್​ ಕುಮಾರ್ ಶೂಟಿಂಗ್​ಗೆ ಕಾಯುತ್ತಿದ್ದರು. ಇನ್ನೇನು ನಾಳೆ ಶೂಟಿಂಗ್​ ಶುರು ಎನ್ನುತ್ತಿದ್ದಂತೆ, ಅಕ್ಷಯ್​ಕುಮಾರ್​ಗೆ ಕರೆ ಮಾಡಿದ್ದ ನಿರ್ದೇಶಕ ಸಂದೇಶ್​ ಕೊಹ್ಲಿ, ನೀವು ಶೂಟಿಂಗ್​ಗೆ ಬರುವ ಅವಶ್ಯಕತೆ ಇಲ್ಲ ಎಂದಿದ್ದರು!

ಹಾಗಾದರೆ, ಆ ಸಿನಿಮಾಕ್ಕೆ ಆಯ್ಕೆಯಾಗಿದ್ದು ಯಾರು?

ಬೇರಾರು ಅಲ್ಲ ಬಾಲಿವುಡ್​ನ ಖ್ಯಾತ ನಿರ್ದೇಶಕ ವೀರು ದೇವಗನ್​ ಪುತ್ರ ಅಜಯ್​ ದೇವಗನ್​. ಅಕ್ಷಯ್​ ನಿಭಾಯಿಸಬೇಕಿದ್ದ ಪಾತ್ರವನ್ನು ಅಜಯ್ ಮಾಡಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಸಿನಿಮಾ ಸೂಪರ್​ ಹಿಟ್​ ಆಯಿತು. ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ, ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಅಂದಹಾಗೆ, ಅಕ್ಷಯ್​ ಕುಮಾರ್ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಹಾಗಾಗಿ ಆವತ್ತಿನ ಆ ಸಿನಿಮಾ ಅವಕಾಶ ಮಿಸ್​ ಆಗಿತ್ತು ಎಂದು ಹಳೇಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಅಕ್ಷಯ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net