ಮಗಳೇ ಬಿಗ್​ಬಾಸ್​ ಬಿಟ್ಟು ಮನೆಗೆ ಬಾ! ಮೋಹನ್​ಲಾಲ್​ ಎದುರೇ ವೇದಿಕೆಯಲ್ಲಿ ಕಣ್ಣೀರಾಕಿದ ಸ್ಪರ್ಧಿಯ ಪಾಲಕರು | Bigg Boss

Bigg Boss
ಮಗಳೇ ಬಿಗ್​ಬಾಸ್​ ಬಿಟ್ಟು ಮನೆಗೆ ಬಾ! ಮೋಹನ್​ಲಾಲ್​ ಎದುರೇ ವೇದಿಕೆಯಲ್ಲಿ ಕಣ್ಣೀರಾಕಿದ ಸ್ಪರ್ಧಿಯ ಪಾಲಕರು | Bigg Boss
Published on: 

Bigg Boss: ಬಿಗ್ ಬಾಸ್ ಮಲಯಾಳಂ ಸೀಸನ್ 8ರ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ಹಾಗೂ ಭಾವನಾತ್ಮಕ ಘಟನೆಯೊಂದು ವಾರಾಂತ್ಯದ ಸಂಚಿಕೆಯಲ್ಲಿ ನಡೆದಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸೀಸನ್​ 8ರಲ್ಲಿ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿರುವ ಸೋಷಿಯಲ್​ ಮೀಡಿಯಾ ಕಂಟೆಂಟ್ ಕ್ರಿಯೇಟರ್ ನೇಹಾ ಫಾತಿಮಾ ಅವರ ತಂದೆ-ತಾಯಿ ಸ್ವತಃ ವೇದಿಕೆಗೆ ಆಗಮಿಸಿ, ಮಗಳನ್ನು ಈ ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತೆ ಹೇಳಿರುವ ಪ್ರೋಮೋ ಒಂದು ಇದೀಗ ಮಲಯಾಳಂ ಬಿಗ್​ಬಾಸ್​ ವೀಕ್ಷಕರನ್ನು ಅಕ್ಷರಶಃ ಬೆರಗಾಗಿಸಿದೆ. ಅಷ್ಟಕ್ಕೂ ಆ ಹುಡುಗಿ ಮಾಡಿದ್ದೇನು? ಕಾರ್ಯಕ್ರಮದ ನಿರೂಪಕ, ಹಿರಿಯ ನಟ ಮೋಹನ್​ ಲಾಲ್​ ಎದುರೇ ಪೋಷಕರು ಕಣ್ಣೀರಿಟ್ಟಿದ್ದೇಕೆ? ಸ್ಪರ್ಧಿ ಮಾಡಿದ ತಪ್ಪಾದರೂ ಏನು? ಎಂಬ ಹಲವರು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಇದೇ ಕಾರಣ?

ವಾರದ ಸಂಚಿಕೆಯಲ್ಲಿ ನೇಹಾ ಫಾತಿಮಾ ತನ್ನ ಸಹ-ಸ್ಪರ್ಧಿ ಸಂತೋಷ್ ರಾಜ್ (ತಾಷಿ)ಗೆ ಪ್ರೀತಿಯ ಪ್ರಸ್ತಾವನೆಯನ್ನು ಮುಂದಿಟ್ಟರು ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಪೋಷಕರು ತೀವ್ರ ಅಸಮಾಧಾನಗೊಂಡು ನೇರವಾಗಿ ವಾರಾಂತ್ಯದ ಸಂಚಿಕೆಗೆ ಆಗಮಿಸಿ, ಮಗಳನ್ನು ಬಿಗ್​ಬಾಸ್​ ಶೋನಿಂದ ಹೊರಬರುವಂತೆ ಕೇಳಿಕೊಂಡಿದ್ದಾರೆ. ಈ ಕುರಿತು ನೇಹಾ ಪೋಷಕರು ಹೇಳಿದ ಮಾತುಗಳಿವು.

ವೇದಿಕೆಯಲ್ಲಿ ಕಣ್ಣೀರಾಕಿದ ತಾಯಿ

"ನೇಹಾ, ನಿನಗೆ ನಾವು ನೆನಪಿದ್ದೀವಾ? ನಮಗ್ಯಾಕೋ ಹಾಗೆ ಅನಿಸುತ್ತಿಲ್ಲ" ಎಂದು ತಂದೆ ಕೇಳಿದ್ದಾರೆ. ನಂತರ ಮೈಕ್​ ಪಡೆದು ಮಾತನಾಡಿದ ತಾಯಿ, "ಮನೆಯಲ್ಲಿ ಪ್ರತಿಯೊಬ್ಬರೂ ಆಟವಾಡುತ್ತಿದ್ದಾರೆ. ಆದರೆ, ನೀನು ಭಾವನೆಗಳಿಗೆ ಸಿಲುಕಿ ಕುಳಿತಿದ್ದೀಯ. ಇತರರು ನಿನ್ನ ಭಾವನೆಗಳನ್ನು ತಮ್ಮ ಆಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾವೇನು ಮಾಡಬೇಡ ಅಂದಿದ್ದೇವೋ, ಅದನ್ನೇ ನೀನು ಮಾಡುತ್ತಿದ್ದೀಯ. ನೀನು ಯಾವುದೋ ಒಂದು ಭರವಸೆ ಇಟ್ಟುಕೊಂಡಿದ್ದೀಯ, ಅದು ಸುಳ್ಳು. ಇದರಿಂದ ನಮಗೆ 100ರಷ್ಟು ನೋವಾಗಿದೆ" ಎಂದು ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದಾರೆ.

Also Read
ಬಾಟಲಿ ಮೇಲೆ ನೀವಿದನ್ನು ಗಮನಿಸಿದ್ದೀರಾ? ಶುದ್ಧ ನೀರೆಂದ ಮೇಲೂ ಎಕ್ಸ್ಪೈರಿ ಡೇಟ್ ಹಾಕುವುದೇಕೆ ಗೊತ್ತಿದ್ಯಾ? ಇಲ್ಲಿದೆ ಉತ್ತರ | Water Bottle
Bigg Boss

ಪೋಷಕರ ಮಾತುಗಳನ್ನು ಕೇಳಿ ನೇಹಾ ಆಘಾತಕ್ಕೊಳಗಾಗಿದ್ದು, ಹೆತ್ತವರ ಮಾತಿಗೆ ಕಟ್ಟುಬಿದ್ದು, ಗೌರವ ಕೊಟ್ಟು ಅತಿದೊಡ್ಡ ರಿಯಾಲಿಟಿ ಶೋನಿಂದ ಹೊರಹೋಗುತ್ತಾರೋ ಅಥವಾ ಅವರ ಬಳಿ ಕ್ಷಮೆ ಕೇಳಿ ಆಟವನ್ನು ಮುಂದುವರಿಸುತ್ತಾರೋ? ಎಂಬುದನ್ನು ವೀಕೆಂಡ್​ ಸಂಚಿಕೆಗಳನ್ನು ನೋಡಿಯೇ ತಿಳಿಯಬೇಕಿದೆ. ಒಟ್ಟಾರೆ, ಸಂಚಿಕೆಯ ಪ್ರೋಮೋ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ,(ಏಜೆನ್ಸೀಸ್).