ಕೊನೆಯ ಕ್ಷಣದಲ್ಲಿ ನೀನಾ ಗುಪ್ತಾ ಮದುವೆ ಕ್ಯಾನ್ಸಲ್​ ಆಗಿತ್ತಂತೆ!

Neena Gupta - Final
Published on

ಮುಂಬೈ: ಬಾಲಿವುಡ್​ ನಟಿ ಮತ್ತು 'ಬದಾಯಿ ಹೋ' ಖ್ಯಾತಿಯ ನೀನಾ ಗುಪ್ತಾ ಅವರ ಆತ್ಮಚರಿತ್ರೆ, 'ಸಚ್​ ಕಹುಂ ತೋ' ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ತಮ್ಮ ಜೀವನದ ಹಲವು ವಿಷಯಗಳನ್ನು ಬರೆದುಕೊಂಡಿರುವ ನೀನಾ ಗುಪ್ತಾ, ಅದೊಮ್ಮೆ ತಮ್ಮ ಮದುವೆ ಕೊನೆಯ ಕ್ಷಣದಲ್ಲಿ ಕ್ಯಾನ್ಸಲ್​ ಆಗಿದ್ದನ್ನು ಹೇಳಿಕೊಂಡಿದ್ದಾರೆ.

80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ನೀನಾ ಗುಪ್ತಾ, ಕ್ರಿಕೆಟಿಗ ವಿವಿಯನ್​ ರಿಚರ್ಡ್ಸ್​ ಅವರನ್ನು ಪ್ರೀತಿಸುತ್ತಿದ್ದರು. ಈ ಸಂಬಂಧದಿಂದ ಅವರಿಗೊಂದು ಮದುವೆಯೂ ಆಗಿತ್ತು. ನಂತರದ ದಿನಗಳಲ್ಲಿ ವಿವಿಯನ್​ ರಿಚರ್ಡ್ಸ್​, ವಾಪಸ್ಸು ವೆಸ್ಟ್​ ಇಂಡೀಸ್​ಗೆ ಹೊರಟು ಹೋದರು. ಈ ಸಂದರ್ಭದಲ್ಲಿ ನೀನಾ, ತಮ್ಮ ಮಗಳು ಮಸಾಬಾಳನ್ನು ಒಬ್ಬಂಟಿಯಾಗಿ ಬೆಳೆಸಿದರು.

ಈ ಮಧ್ಯೆ, ಅವರು ಮದುವೆಯಾಗಬೇಕಿತ್ತಂತೆ. ಆದರೆ, ಕೊನೆಯ ಕ್ಷಣದಲ್ಲಿ ಆ ಮದುವೆಯಾಯಿತಂತೆ. 'ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ನಾನು ದೆಹಲಿಗೆ ಬಟ್ಟೆ ಖರೀದಿಸುವುದಕ್ಕೆ ಹೋಗಿದ್ದೆ. ಈ ಸಂದರ್ಭದಲ್ಲಿ ನನ್ನನ್ನು ಮದುವೆಯಾಗಬೇಕಿದ್ದ ಹುಡುಗ ಫೋನ್​ ಮಾಡಿ, ಮದುವೆ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. ನನಗೆ ಅವನನ್ನು ವರಿಸಬೇಕೆಂಬ ಆಸೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದುವರೆಗೂ ನನಗೆ ಆತ ಯಾಕೆ ಮದುವೆ ಬೇಡ ಎಂಬ ವಿಷಯ ಗೊತ್ತಿಲ್ಲ. ಈಗ ಅವನಿಗೂ ಮದುವೆಯಾಗಿ, ನೆಮ್ಮದಿಯಾಗಿದ್ದಾನೆ' ಎಂದು ನೀನಾ ಹೇಳಿಕೊಂಡಿದ್ದಾರೆ.

ಇದಾಗಿ ಬಹಳ ವರ್ಷಗಳ ಕಾಲ ಒಂಟಿಯಾಗಿದ್ದ ನೀನಾ, 2008ರಲ್ಲಿ ವಿವೇಕ್​ ಮೆಹ್ರಾ ಎಂಬ ಚಾರ್ಟರ್ಡ್​​ ಅಕೌಂಟೆಂಟ್​ ಒಬ್ಬರನ್ನು ಮದುವೆಯಾದರು. ಫ್ಯಾಶನ್​ ಡಿಸೈನರ್​ ಆಗಿ ಗುರುತಿಸಿಕೊಂಡಿರುವ ಮಗಳು ಮಸಾಬಾಗೂ ಮದುವೆಯಾಗಿ ಡೈವೋರ್ಸ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net