ನಯನತಾರಾಗೂ ಕಾಸ್ಟಿಂಗ್​ ಕೌಚ್​ ಅನುಭವವಾಗಿತ್ತಂತೆ!

Nayanthara
Published on

ಚೆನ್ನೈ: ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ಆಗಾಗ ಸುದ್ದಿ ಕೇಳಿಬರುತ್ತಲೇ ಇರುತ್ತದೆ ಮತ್ತು ಹಲವರು ನಟಿಯರು ಈ ಕಾಸ್ಟಿಂಗ್​ ಕೌಚ್​ಗೆ ಒಂದಲ್ಲ ಒಂದು ಬಾರಿ ತುತ್ತಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ನಟಿ ನಯನತಾರಾ ಸರದಿ.

ನಯನತಾರಾ ಸಹ ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಸಮಸ್ಯೆಯಿಂದ ಬಳಲಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು, ಅಂಥದ್ದೊಂದು ಅವಕಾಶವನ್ನು ಧಿಕ್ಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಅದಕ್ಕೆ ಬದಲಿಯಾಗಿ ಚಿತ್ರತಂಡದವರು ನನ್ನಿಂದ ಬೇರೆ ಅಪೇಕ್ಷೆಯಲ್ಲಿದ್ದರು. ಆದರೆ, ನಾನು ಆ ಅವಕಾಶವನ್ನು ನಿರಾಕರಿಸಿದೆ. ಕಾರಣ, ನನಗೆ ನನ್ನ ಮೇಲೆ ನನಗೆ ನಂಬಿಕೆ ಇದೆ' ಎಂದು ನಯನತಾರಾ ಹೇಳಿದ್ದಾರೆ.

ಬರೀ ನಯನತಾರಾ ಒಬ್ಬರೇ ಅಲ್ಲ, ಇದುವರೆಗೂ ಹಲವು ನಟಿಯರು ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ಕೆಲವರಂತೂ ಅದರಿಂದಾಗಿಯೇ ತಾವು ಚಿತ್ರರಂಗದಿಂದ ದೂರವಾಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net