'ಆರ್​ಆರ್​ಆರ್​' ನಡುವೆ ತೂರಲೆತ್ನಿಸಿದ 'ನಟ ಭಯಂಕರ'; ಕೊನೆಗೂ ಬೇಡ ಎಂದು ಸುಮ್ಮನಾದ್ನಂತೆ 'ಒಳ್ಳೇ ಹುಡುಗ'!

Nata Bhayankara
Published on

ಬೆಂಗಳೂರು: ರಾಜಮೌಳಿ ನಿರ್ದೇಶನ, ಜೂನಿಯರ್ ಎನ್​​ಟಿಆರ್​, ರಾಮ್​ಚರಣ್​, ಅಜಯ್​ ದೇವಗನ್​ ಮತ್ತಿತರ ಘಟಾನುಘಟಿಗಳ ಅಭಿನಯದಲ್ಲಿ ಮೂಡಿಬಂದಿರುವ 'ಆರ್​ಆರ್​ಆರ್​' ನಡುವೆ ತೂರಿಕೊಳ್ಳಲು ಯೋಚಿಸಿದ್ದನಂತೆ 'ನಟ ಭಯಂಕರ'!

ಅರ್ಥಾತ್​, 'ಒಳ್ಳೇ ಹುಡುಗ' ಪ್ರಥಮ್ ನಿರ್ದೇಶನ ಹಾಗೂ ಅಭಿನಯದ 'ನಟ ಭಯಂಕರ' ಸಿನಿಮಾದ ಟ್ರೇಲರನ್ನು 'ಆರ್​ಆರ್​ಆರ್​' ಸಿನಿಮಾದ ಮಧ್ಯೆ ತೋರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಲಾಗಿದೆ.

'ಆರ್​ಆರ್​ಆರ್'​ ಚಿತ್ರಕಥೆಯೇ ದೊಡ್ಡಾಗಿದ್ದು, ಸಿನಿಮಾ ಮೂರು ಗಂಟೆಗೂ ಅಧಿಕ ಅವಧಿಯದ್ದಾಗಿದ್ದು, ಅದರ ಮಧ್ಯೆ 'ನಟ ಭಯಂಕರ' ಟ್ರೇಲರ್​ ಬಿಡುವುದು ಬೇಡ ಎಂದು ಹಿತೈಷಿಗಳು ಹೇಳಿದ್ದರಿಂದ ಸುಮ್ಮನಾಗಬೇಕಾಯಿತು ಎಂದು ಪ್ರಥಮ್​ ಹೇಳಿಕೊಂಡಿದ್ದಾರೆ.

ಪ್ರಥಮ್​ ನಿರ್ದೇಶನದ ಈ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾದಲ್ಲಿ ಪ್ರಥಮ್​, ಸುಷ್ಮಿತಾ ಜೋಶಿ, ನೀಹಾರಿಕಾ ಶೆಣೈ ಮುಂತಾದವರು ನಟಿಸಿದ್ದು, ಸ್ವರಸ್ಯ ಸಿನಿ ಕ್ರಿಯೇಷನ್ಸ್​ ಬ್ಯಾನರ್​ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸದ್ಯಕ್ಕೆ ಜನವರಿಯಲ್ಲಿ ಟ್ರೇಲರ್ ಹಾಗೂ ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಗೆ ಗುರಿ ಇರಿಸಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net