

ಹೈದರಾಬಾದ್: ನಾನಿ ಅಭಿನಯದ 'ದಸರಾ' ಚಿತ್ರದ ಟೀಸರ್ ಸೋಮವಾರವಷ್ಟೇ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಅದೇ ದಿನ ಅವರ ಇನ್ನೊಂದು ಹೊಸ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರದ ಮುಹೂರ್ತಕ್ಕೆ 'ಮೆಗಾಸ್ಟಾರ್' ಚಿರಂಜೀವಿ ಬಂದು, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ.
ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ಈ ಕಥೆಯನ್ನು ಶೌರ್ಯುವ್ ಅವರೇ ರಚಿಸಿದ್ದಾರೆ. ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.
ಈ ಚಿತ್ರಕ್ಕೆ ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಮಾಡುತ್ತಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶಿಸುತ್ತಿದ್ದಾರೆ.