

ಹೈದರಾಬಾದ್: ಒಂದು ಕಡೆ ಹೊಸ ವರ್ಷದ ದಿನ ಬೇರೆ ಸ್ಟಾರ್ಗಳ ಚಿತ್ರಗಳ ಟೀಸರ್, ಪೋಸ್ಟರ್ಗಳು ಬಿಡುಗಡೆಯಾಗಿದ್ದರೆ, ಇನ್ನೊಂದು ಕಡೆ ತೆಲುಗು ನಟ ನಾನಿ ಅಭಿನಯದ 30ನೇ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರಕ್ಕೆ ಸದ್ಯ ನಾನಿ 30 ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಇನ್ನಷ್ಟೇ ಅಧಿಕೃತ ಹೆಸರು ಇಡಬೇಕಿದೆ
ಇದಬ್ಬೂ ಓದಿ: ಮತ್ತೊಮ್ಮೆ ‘ಗೂಢಾಚಾರಿ’ ಆಗಲು ಹೊರಟ ಅಡವಿ ಶೇಷ್ …
'ನಾನಿ 30' ಚಿತ್ರಕ್ಕೆ ಶೌರ್ಯುವ್ ಆಕ್ಷನ್-ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾ. ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ಈ ಕಥೆಯಲ್ಲಿ ನಾನಿ ಜೋಡಿಯಾಗಿ ಬಾಲಿವುಡ್ ನಟಿ ಹಾಗು ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸಾನು ಜಾನ್ ವರ್ಗೀಸ್ ಅವರ ಛಾಯಾಗ್ರಹಣ ಮತ್ತು ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ.