ಕುಟುಂಬಸ್ಥರ ಅನುಮಾನಕ್ಕೆ ಪ್ರಮುಖ ಕಾರಣ ಸಿದ್ದಾರ್ಥ ಅವರ ವಸ್ತುಗಳು ಸಿಕ್ಕಿರುವ ವಿಚಿತ್ರ ಸ್ಥಿತಿ. ಹಂತಕರು ಸಿದ್ದಾರ್ಥನನ್ನ ಕೊಲೆ ಮಾಡಿ, ಪ್ರಕರಣದ ದಾರಿ ತಪ್ಪಿಸಲು ಆತನ ಮೊಬೈಲ್, ಚಪ್ಪಲಿ ಹಾಗೂ ಬೈಕ್ ಅನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿದ್ದಾರೆ ಎಂದು ಪೋಷಕರು ಸುಳಿವು ನೀಡಿದ್ದಾರೆ. ಟಿವಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇಡೀ ನಾಡನ್ನೇ ನಗಿಸುತ್ತಿದ್ದ ಮಗನ ಕಾಮಿಡಿ ವಿಡಿಯೋಗಳನ್ನು ಈಗ ಮೊಬೈಲ್ನಲ್ಲಿ ನೋಡುತ್ತಾ ಹೆತ್ತ ಕರುಳು ಕಣ್ಣೀರು ಹಾಕುತ್ತಿದ್ದು, ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕಣ್ಣೀರಿನೊಂದಿಗೆ ಮನವಿ ಮಾಡುತ್ತಿದ್ದಾರೆ.