ಮುಯೇ ಥಾಯ್ ಮಾಡುವಾಗ ಇತರ ಎಲ್ಲಾ ಯೋಚನೆಗಳು ಮನಸ್ಸಿನಿಂದ ಮಾಯವಾಗುತ್ತವೆ. ನಿಮ್ಮ ಸಂಪೂರ್ಣ ಗಮನವು ಆ ಕ್ಷಣದ ಕೆಲಸದ ಮೇಲೆ ಮಾತ್ರ ಇರುತ್ತದೆ. ಇದು ನಿಮ್ಮ ಮನಸ್ಸನ್ನು ಕೂಡ ಬದಲಾಯಿಸುತ್ತದೆ. ನನ್ನ ತರಬೇತುದಾರರು ನನಗೆ 10 ಒದೆಗಳನ್ನು ಮಾಡಲು ಹೇಳಿದರೆ, ನಾನು ಒಂಬತ್ತನೇ ಒದೆಗೆ ನಿಲ್ಲಿಸುತ್ತಿದ್ದೆ. ಆಗ ಅವರು, "ನೀನು ಯಾವಾಗಲೂ ಕಡೆಯ ಒದೆಗೆ ಸ್ವಲ್ಪ ಮುಂಚೆಯೇ ನಿಲ್ಲಿಸುತ್ತಿರುವೆ, ಮತ್ತೊಂದು ಒದೆ ಮಾಡು" ಎಂದು ಹೇಳುತ್ತಿದ್ದರು. ಆ ಬಳಿಕ ಅವರು ನನ್ನಿಂದ ಹೆಚ್ಚುವರಿಯಾಗಿ 30 ಒದೆಗಳನ್ನು ಮಾಡಿಸುತ್ತಿದ್ದರು. ಆ ಅನುಭವವು ನನಗೆ ಬೇರೆ ಪಾಠವೊಂದನ್ನು ಕಲಿಸಿತು. ನಾನು ಆರಂಭಿಸಿದ್ದನ್ನು ಯಾವುದೇ ಕಾರಣಕ್ಕೂ ಪೂರ್ಣಗೊಳಿಸಬೇಕು ಎಂಬುದನ್ನು ಅದು ನನಗೆ ಕಲಿಸಿಕೊಟ್ಟಿತು. ಅದಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ. ಈಗ ನನಗೆ ಮುಯೇ ಥಾಯ್ ಅಂದರೆ ತುಂಬಾ ಇಷ್ಟ.