ಕನ್ನಡದಲ್ಲೂ ಬಿಡುಗಡೆಯಾಗಲಿದೆ ರಾಮ್​ಗೋಪಾಲ್​ ವರ್ಮಾ ನಿರ್ಮಾಣದ 'ಮರ್ಡರ್'

Murder - Final
Published on

ಬೆಂಗಳೂರು: ಕೆಲವೇ ದಿನಗಳ ಹಿಂದೆ ರಾಮ್​ಗೋಪಾಲ್​ ವರ್ಮ ನಿರ್ಮಾಣದ 'ಮರ್ಡರ್​' ಚಿತ್ರವು ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಸಂಶಯ ಎಲ್ಲರಿಗೂ ಇತ್ತು. ಈಗ ಆ ಚಿತ್ರ ಇದೇ ಡಿಸೆಂಬರ್​ 24ಕ್ಕೆ ಬಿಡುಗಡೆಯಾಗುತ್ತಿರುವುದಷ್ಟೇ ಅಲ್ಲ, ಕನ್ನಡಕ್ಕೂ ಡಬ್​ ಆಗಿ ಬಿಡುಗಡೆಯಾಗುತ್ತಿದೆ.

'ಮರ್ಢರ್​' ಚಿತ್ರವು ಆಂಧ್ರದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು ಆಧರಿಸಿದ ಈ ಚಿತ್ರ. ತಮ್ಮ ಅನುಮತಿಯನ್ನೇ ಪಡೆಯದೇ ತಮ್ಮ ಜೀವನವನ್ನಾಧರಿಸಿ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಅಮೃತಾ ಎನ್ನುವವರು ನಲಗೊಂಡಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ವಿಷಯವಾಗಿ ನ್ಯಾಯಾಲಯವು ವರ್ಮಾ ಮತ್ತು ತಂಡದವರ ವಿಚಾರಣೆ ನಡೆಸುವುದರ ಜತೆಗೆ, ಪೂರ್ತಿ ವಿಚಾರಣೆಯಾಗುವವರೆಗೂ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಕೆಲವು ದಿನಗಳ ಹಿಂದಷ್ಟೇ, ನ್ಯಾಯಾಲಯವು ವರ್ಮ ಅವರಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿತ್ತು. ಪಾತ್ರಧಾರಿಗಳ ಹೆಸರುಗಳನ್ನು ಕೇಳಿದರೆ, ಯಾವ ಘಟನೆ ಎಂದು ಊಹಿಸಲು ಸಾಧ್ಯವಿರುವುದರಿಂದ, ಪಾತ್ರಧಾರಿಗಳ ಹೆಸರುಗಳನ್ನು ಬದಲಾಯಿಸಬೇಕು ಎಂದು ಸೂಚಿಸಿತ್ತು. ಇದಕ್ಕೆ ವರ್ಮಾ ಒಪ್ಪಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ವರ್ಮ ಮುಂದಾಗುತ್ತಿದ್ದಾರೆ.

ಈಗ ಈ ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ನಟ-ನಿರ್ಮಾಪಕ-ನಿರ್ದೇಶಕ ನವರಸನ್​ ಅವರು 'ಮರ್ಡರ್​' ಚಿತ್ರದ ಕನ್ನಡ ಅವತರಣಿಕೆಯನ್ನು ಶ್ರೀ ಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್​ನಡಿ ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿರುವುದರ ಜೊತೆಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕ್ರೈಂ ಮಿಸ್ಟರಿ ಆಧಾರಿತ ಈ ಚಿತ್ರವನ್ನು ಆನಂದ್​ ಚಂದ್ರ ಎನ್ನುವವರು ನಿರ್ದೇಶಿಸಿದ್ದು, ಈ ಚಿತ್ರಕ್ಕೆ ಅವರ ಕಥೆ ಹಾಗೂ ಚಿತ್ರಕಥೆಯನ್ನು ರಚಿಸಿದ್ದಾರೆ. ಶ್ರೀಕಾಂತ್ ಐಯ್ಯಂಗಾರ್, ಸಾಹಿತಿ, ಗಾಯತ್ರಿ ಭಾರ್ಗವಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net