ಪುರಿ ಜಗನ್ನಾಥ್​-ವಿಜಯ್ ಚಿತ್ರಕ್ಕೆ ಮುಹೂರ್ತ

puri jan 2020
Published on

ಬೆಂಗಳೂರು: ‘ವರ್ಲ್ಡ್ ಫೇಮಸ್ ಲವರ್’ ವಿಜಯ್ ದೇವರಕೊಂಡ ಮೊದಲ ಬಾರಿಗೆ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್-ಕಟ್ ಹೇಳುತ್ತಿದ್ದು, ಚಿತ್ರದ ಮುಹೂರ್ತ ಮುಂಬೈನಲ್ಲಿ ಸೋಮವಾರ ಸರಳವಾಗಿ ನೆರವೇರಿತು.

ವಿಜಯ್ ದೇವರಕೊಂಡ ಅಭಿನಯಿಸಿದ ಮೊದಲ ದೃಶ್ಯಕ್ಕೆ ಜನಪ್ರಿಯ ನಟಿ ಚಾರ್ವಿು ಕೌರ್ ಕ್ಲ್ಯಾಪ್ ಮಾಡುವ ಮೂಲಕ ಶೂಟಿಂಗ್​ಗೆ ಚಾಲನೆ ನೀಡಿದರು. ‘ಧರ್ಮ ಪೊ›ಡಕ್ಷನ್’ ಅರ್ಪಿಸುವ ಈ ಚಿತ್ರಕ್ಕೆ ಚಾರ್ವಿು ಕೌರ್, ಕರಣ್ ಜೋಹರ್, ಅಪೂರ್ವ ಮೆಹ್ತ ಜತೆಗೆ ಪುರಿ ಜಗನ್ನಾಥ್ ಕೂಡ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಗೆಟಪ್ ಶ್ರೀನು ಪ್ರಮುಖ ತಾರಾವರ್ಗದಲ್ಲಿದ್ದಾರೆ.

ಈ ಹಿಂದೆ ವಿಜಯ್ಗೆ ನಾಯಕಿಯಾಗಿ ಜಾಹ್ನವಿ ಕಪೂರ್ ಹಾಗೂ ಕಿಯಾರಾ ಅಡ್ವಾಣಿ ಅವರಲ್ಲಿ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ಇಬ್ಬರೂ ಒಪ್ಪಿರಲಿಲ್ಲ. ಕೊನೆಗೆ ನಿರ್ವಪಕ ಕರಣ್ ಜೋಹರ್ ಸಲಹೆ ಮೇರೆಗೆ ಬಾಲಿವುಡ್​ನ ಜನಪ್ರಿಯ ನಟ ಚುಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಅವರನ್ನು ನಿರ್ದೇಶಕ ಪುರಿ ಜಗನ್ನಾಥ್ ಆಯ್ಕೆ ಮಾಡಿದ್ದಾರಂತೆ. ಚಿತ್ರದ ಎರಡನೇ ಷೆಡ್ಯೂಲ್ ಶೂಟಿಂಗ್​ನಲ್ಲಿ ನಟಿ ಅನನ್ಯಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಚಿತ್ರಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದೆ ಎಂಬ ಸುದ್ದಿ ಕೇಳಿಬಂದರೂ ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆಕ್ಷನ್, ಲವ್, ಎಂಟರ್​ಟೇನ್​ವೆುಂಟ್​ನ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮಾಸ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಥಾಯ್ಲೆಂಡ್​ನಲ್ಲಿ ಮಾರ್ಷಲ್ ಆರ್ಟ್ಸ್ ಕಲಿತಿರುವುದು ವಿಶೇಷ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹಿಂದಿ ಭಾಷೆಯಲ್ಲಿ ತಯಾರಿಸಿ ಬಳಿಕ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಡಬ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net