

Mrunal Thakur : ಮೃನಾಲ್ ಠಾಕೂರ್... ಈ ಹೆಸರು ಕೇತ್ತಿದ್ದಂತೆಯೇ 'ಸೀತಾ ರಾಮಂ' ಸಿನಿಮಾ ನೆನಪಿಗೆ ಬರುತ್ತದೆ. ಈ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ಮೃನಾಲ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪ್ರಸ್ತುತ ಅವರು ಬಾಲಿವುಡ್ನಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆ ಸ್ಫೋಟಕ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಮೃನಾಲ್ ಅವರು ತೆಲುಗು ನಟನೊಬ್ಬನನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಇದು ನಿಜವೇ? ನಾವೀಗ ತಿಳಿಯೋಣ.
ಮೃನಾಲ್ ಅವರ ಮೊದಲ ತೆಲುಗು ಚಿತ್ರ 'ಸೀತಾರಾಮಂ' ನಲ್ಲಿ ನಟ ಸುಮಂತ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರ ನಡುವೆ ಬೆಳೆದ ಪರಿಚಯ ಸ್ವಲ್ಪ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡುತ್ತಿವೆ. ಅಲ್ಲದೆ, ಇಬ್ಬರೂ ಒಟ್ಟಿಗೆ ಆತ್ಮೀಯದಿಂದಿರುವ ಫೋಟೋ ಕೂಡ ವೈರಲ್ ಆಗಿದ್ದು, ವದಂತಿಗೆ ಪುಷ್ಠಿ ನೀಡಿದೆ.
ಆದರೆ, ಮೃನಾಲ್ ಮತ್ತು ಸುಮಂತ್ ನಿಜವಾಗಿಯೂ ಪ್ರೀತಿಸುತ್ತಿದ್ದಾರೆಯೇ ಎಂದು ಹೇಳುವುದು ಕಷ್ಟ. ಏಕೆಂದರೆ, ಫೋಟೋದಲ್ಲಿ ಇಬ್ಬರು ತುಂಬಾ ಹತ್ತಿರವಾಗಿದ್ದಾರೆ ಎಂಬ ಕಾರಣಕ್ಕೆ ಅದನ್ನು ಪ್ರೀತಿ ಎಂದು ಹೇಳಲಾಗುವುದಿಲ್ಲ. ಮತ್ತೊಂದೆಡೆ, ತಮ್ಮ ವೃತ್ತಿಜೀವನದ ವಿಷಯದಲ್ಲಿ ಬಿಜಿಯಾಗಿರುವ ಮೃನಾಲ್, ಸದ್ಯಕ್ಕೆ ಮದುವೆಯಾಗುವುದು ಅನುಮಾನ. ಆದ್ದರಿಂದ, ಇವೆಲ್ಲವೂ ಕೇವಲ ವದಂತಿಗಳೆಂದು ತೋರುತ್ತದೆ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ, ನಟ ಸುಮಂತ್, ನಾಯಕಿ ಕೀರ್ತಿ ರೆಡ್ಡಿ ಅವರನ್ನು ಮದುವೆಯಾಗಿದ್ದರು. ಆದರೆ, ಎರಡು ವರ್ಷಗಳ ನಂತರ ಅವರಿಬ್ಬರು ಬೇರ್ಪಟ್ಟರು. ಅಂದಿನಿಂದ, ಸುಮಂತ್ ಒಂಟಿಯಾಗಿ ಉಳಿದಿದ್ದಾರೆ. ಪ್ರಸ್ತುತ, ಅವರು ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ, ಮೃನಾಲ್ ಠಾಕೂರ್ ಅವರೊಂದಿಗಿನ ಪ್ರೀತಿ ಮತ್ತು ವಿವಾಹದ ವದಂತಿಗಳಿಗೆ ಸುಮಂತ್ ಅವರು ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. (ಏಜೆನ್ಸೀಸ್)