Flop Movies : ಈಗ ನಾವು ವರ್ಷದ ಕೊನೆಯ ತಿಂಗಳಲ್ಲಿದ್ದು, ಇನ್ನೊಂದು ಹತ್ತು ದಿನ ಕಳೆದರೆ ಹೊಸ ವರ್ಷವನ್ನು ಪ್ರವೇಶಿಸಲಿದ್ದೇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸರಿಸುಮಾರು 1500 ಕ್ಕೂ ಹೆಚ್ಚಿನ ಸಿನಿಮಾಗಳು ತೆರೆಕಂಡಿದ್ದು, ಅದರಲ್ಲಿ ಹತ್ತೋ-ಇಪ್ಪತ್ತೋ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನವನ್ನು ಗೆದ್ದಿದ್ದರೆ, ಬೆರಳೆಣಿಕೆಯಷ್ಟು ಸಿನಿಮಾಗಳು ಮನದ ಜತೆಗೆ ಮನಿ(ಹಣ) ಯನ್ನು ಗಳಿಸಿವೆ. ಕಾಕತಾಳೀಯವೋ ಏನೋ ಅತ್ಯಧಿಕ ಬಜೆಟ್ನೊಂದಿಗೆ ನಿರ್ಮಾಣವಾದ ಸಿನಿಮಾಗಳೇ ಅತೀ ಹೆಚ್ಚು ಪ್ಲಾಪ್ ಆಗಿದ್ದು, ಹಣ, ಹೆಸರಾಂತ ತಾರಾಗಣ ಇವುಗಳ ಬದಲು ಬಲವಾದ ಚಿತ್ರಕತೆ ಮತ್ತು ಸಹಜ ಅಭಿನಯವುಳ್ಳ ಸಿನಿಮಾಗಳು ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದಿವೆ. ಈ ಸಿನಿಮಾದ ಬಜೆಟ್ ಇಷ್ಟು ಕೋಟಿಯಂತೆ! ಖ್ಯಾತನಾಮ ಕಲಾವಿದರ ದಂಡೆ ಇದೆ ಈ ಸಿನಿಮಾ ಚಿತ್ರರಂಗದಲ್ಲಿ ಮೈಲಿಗಲ್ಲನ್ನು ನಿರ್ಮಿಸಲಿದೆ ಎಂದು ಅಂದಾಜಿಸಿದ ಸಿನಿಮಾಗಳೇ ಮಕಾಡೆ ಮಲಗಿವೆ. ಇಂದು ಭಾರಿ ನೀರಿಕ್ಷೆಯೊಂದಿಗೆ ತೆರೆಕಂಡು ಪ್ಲಾಪ್ ಆದ ಸಿನಿಮಾಗಳ ಬಗ್ಗೆ ತಿಳಿಯೋಣ.