ಜಿಗ್ರಿ ದೋಸ್ತ್ v/s ಚಡ್ಡಿ ದೋಸ್ತ್: ಇದು ಬಿಡುಗಡೆ ಕದನ

Jigri dosth
Published on

ಬೆಂಗಳೂರು: ಚಿತ್ರಮಂದಿರಗಳಲ್ಲಿ ಮತ್ತೆ ಸಿನಿಮಾ ಕಲರವ ನಿಧಾನಕ್ಕೆ ಶುರುವಾಗಿದೆ. ಸ್ಟಾರ್ ಕಲಾವಿದರ ಸಿನಿಮಾಗಳಿಲ್ಲದಿದ್ದರೂ, ಹೊಸಬರ ಚಿತ್ರಗಳು ಥಿಯೇಟರ್​ಗಳತ್ತ ಮುಖ ಮಾಡಿವೆ. ಹೀಗಿರುವಾಗಲೇ ಇದೇ 17ಕ್ಕೆ ‘ದೋಸ್ತ್’ಗಳ ಮುಖಾಮುಖಿಯಾಗಲಿದೆ. ‘ಜಿಗ್ರಿ ದೋಸ್ತ್’ ಮತ್ತು ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ್ಟ' ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿವೆ. ನಟ ಮತ್ತು ನಿರ್ದೇಶಕ ಮೋಹನ್ ಆಕ್ಷನ್-ಕಟ್ ಹೇಳಿರುವ ‘ಜಿಗ್ರಿ ದೋಸ್ತ್’ ಸಿನಿಮಾದಲ್ಲಿ ಸ್ಕಂದ ಅಶೋಕ್, ಚೇತನ್, ವಿನೋದ್ ಆಳ್ವಾ, ಇರ್ಫಾನ್, ಸುಷ್ಮಾ ಮತ್ತು ಅಕ್ಷತಾ ನಟಿಸಿದ್ದಾರೆ. ಹಿರಿಯ ನಿರ್ವಪಕ ಬಿ.ಎನ್. ಗಂಗಾಧರ್ ಬಂಡವಾಳ ಹೂಡಿದ್ದಾರೆ.

ಇತ್ತ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ್ಟ' ಚಿತ್ರದಲ್ಲಿ ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ನಟಿಸಿದ್ದಾರೆ. ಇಬ್ಬರು ಸ್ನೇಹಿತರ ನಡುವಿನ ಬಂಧ ಮತ್ತು ಘರ್ಷಣೆಯ ಹಿನ್ನೆಲೆಯಲ್ಲಿ ಈ ಚಿತ್ರ ಮಾಡಲಾಗಿದೆ. ಸ್ನೇಹ, ದ್ವೇಷದ ಜತೆಗೆ ಲವ್​ಸ್ಟೋರಿ ಸಹ ಇದ್ದು, ಗೌರಿ ನಾಯರ್ ನಾಯಕಿಯಾಗಿದ್ದಾರೆ. ಸೆವೆನ್ ರಾಜ್ ನಿರ್ವಣದ ಜತೆಗೆ ವಿಲನ್ ಆಗಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net