ಮೋಹನ್ ಲಾಲ್ ಅವರ ಜಾಹೀರಾತುಗಳಲ್ಲಿ ಪ್ರಚಾರ ಮಾಡಿದಂತೆ ವಾರ್ಷಿಕ ಶೇಕಡಾ 12 ರಷ್ಟು ಮಾತ್ರ ಬಡ್ಡಿ ವಿಧಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದಾಗ್ಯೂ, ಸಾಲವನ್ನು ಮುಕ್ತಾಯಗೊಳಿಸಿ ಚಿನ್ನವನ್ನು ಹಿಂಪಡೆಯಲು ಅವರು ಪ್ರಯತ್ನಿಸಿದಾಗ, ಅವರಿಗೆ ಹೆಚ್ಚಿನ ಬಡ್ಡಿದರವನ್ನು ವಿಧಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ, ತಾವು ಪಾವತಿಸಿರುವ ಹೆಚ್ಚುವರಿ ಬಡ್ಡಿಯನ್ನು ಮರುಪಾವತಿಸುವಂತೆ ಮತ್ತು ಮಾನಸಿಕ ಯಾತನೆ ಮತ್ತು ನಷ್ಟಗಳಿಗೆ ₹25 ಲಕ್ಷ ಪರಿಹಾರವನ್ನು ನೀಡಬೇಕಾಗಿ ಅವರು ಕೋರಿದ್ದರು,(ಏಜನ್ಸೀಸ್).