ನನ್ನ ಮದುವೆ ವಿಚಾರದಲ್ಲಿ ಆತನ ನಿರ್ಧಾರವೇ ಅಂತಿಮ: ನಟಿ ಮಮಿತಾ ಬೈಜು ಅಚ್ಚರಿ ಹೇಳಿಕೆ! Mamitha Baiju

ನಟಿ ಮಮಿತಾ ಬೈಜು
ನಟಿ ಮಮಿತಾ ಬೈಜು
Published on

ಪ್ರಮುಖ ಮುಖ್ಯಾಂಶಗಳು

  • ಪ್ರೇಮುಲು ಚಿತ್ರದ ಮೂಲಕ ಮಲಯಾಳಂ ನಟಿ ಮಮಿತಾ ಬೈಜು ಅಪಾರ ಕ್ರೇಜ್ ಗಳಿಸಿದ್ದಾರೆ
  • ಮಮಿತಾಗೆ ಸಾಕಷ್ಟು ಲವ್​ ಹಾಗೂ ಮದುವೆಯ ಪ್ರಪೋಸಲ್​ಗಳು ಬರುತ್ತಿವೆಯಂತೆ
  • ಮದುವೆ ಬಗ್ಗೆ ಇತ್ತೀಚೆಗೆ ಮಮಿತಾ ಅವರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ
ತಿರುವನಂತಪುರ: ಪ್ರೇಮುಲು ಚಿತ್ರದ ಮೂಲಕ ಮಲಯಾಳಂ ನಟಿ ಮಮಿತಾ ಬೈಜು ( Mamitha Baiju ) ಅವರು ಅಪಾರ ಕ್ರೇಜ್ ಗಳಿಸಿದ್ದಾರೆ. ಈ ಒಂದೇ ಸಿನಿಮಾದಿಂದ ಯುವಕರ ಕ್ರಶ್ ಆಗಿರುವ ಮಮಿತಾಗೆ ಸಾಕಷ್ಟು ಲವ್​ ಹಾಗೂ ಮದುವೆಯ ಪ್ರಪೋಸಲ್​ಗಳು ಬರುತ್ತಿವೆಯಂತೆ. ಈ ವಿಚಾರವಾಗಿ ಇತ್ತೀಚೆಗೆ ಮಮಿತಾ ಅವರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗವಹಿಸಿದ ಮಮಿತಾ, ಪ್ರೇಮುಲು ಚಿತ್ರದ ನಂತರ, ನನಗೆ ಅನೇಕ ಪ್ರಪೋಸಲ್‌ಗಳು ಬಂದಿವೆ. ಇದೆಲ್ಲ ಕೇವಲ ಸಾಮಾಜಿಕ ಜಾಲತಾಣದಿಂದ ಬಂದಿದ್ದಲ್ಲ, ಕೆಲವರು ನನ್ನ ಮೊಬೈಲ್​ ಸಂಖ್ಯೆಯನ್ನು ಪಡೆದು ನನಗೆ ನೇರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅವುಗಳನ್ನು ಓದಲು ಕೂಡ ನನಗೆ ಯಾವುದೇ ಸಮಯವಾಗಲಿ ಅಥವಾ ತಾಳ್ಮೆಯಾಗಲಿ ಇಲ್ಲ. ಅದಕ್ಕಾಗಿಯೇ ನನ್ನ ಅಣ್ಣ ಅದನ್ನೆಲ್ಲಾ ನೋಡಿಕೊಳ್ಳುತ್ತಿದ್ದಾರೆ ಎಂದು ಮಮಿತಾ ಹೇಳಿದ್ದಾರೆ.
ನನ್ನ ಅಣ್ಣನ ಹೆಸರು ಮಿಥುನ್. ನಾವಿಬ್ಬರು ಆಪ್ತ ಸ್ನೇಹಿತರಂತೆ ಇದ್ದೇವೆ. ನಾನು ಮಾಡುವ ಎಲ್ಲದರಲ್ಲೂ ನನ್ನ ಅಣ್ಣ ಭಾಗಿಯಾಗುತ್ತಾನೆ. ಅಲ್ಲದೆ, ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ನನ್ನ ಅಣ್ಣನ ಜೊತೆ ಸಮಾಲೋಚನೆ ನಡೆಸುತ್ತೇನೆ. ಈ ವಿಚಾರದಲ್ಲಿ ನನ್ನ ಮದುವೆ ಕೂಡ ಹೊರತಾಗಿಲ್ಲ ಎಂದು ಮಮಿತಾ ಅವರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಮಿತಾ ಅವರ ಇತ್ತೀಚಿನ ಚಿತ್ರ ಡ್ಯೂಡ್ ಸೂಪರ್​ ಡೂಪರ್​ ಹಿಟ್ ಆಯಿತು. ನಟ ಪ್ರದೀಪ್ ರಂಗನಾಥನ್ ಅವರು ನಟಿಸಿದ ಈ ಚಿತ್ರ ಭಾರಿ ಯಶಸ್ಸು ಕಂಡಿತು. ಈ ಚಿತ್ರದ ನಂತರ, ಮಮಿತಾ ಮತ್ತೊಂದು ದೊಡ್ಡ ಚಿತ್ರ ಜನ ನಾಯಗನ್​ನಲ್ಲಿ ನಟಿಸಿದ್ದಾರೆ. ವಿಜಯ್ ದಳಪತಿ ನಟಿಸಿದ ಈ ಚಿತ್ರ 2026 ರ ಸಂಕ್ರಾಂತಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮಮಿತಾ ವಿಜಯ್ ದಳಪತಿ ಅವರ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net