ಅಂದಹಾಗೆ, ನಟಿ ಐಶ್ವರ್ಯಾ ಲಕ್ಷ್ಮಿ ಅವರು ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಮುಖ್ಯವಾಗಿ ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 1991 ಸೆಪ್ಟೆಂಬರ್ 6ರಂದು ತಿರುವನಂತಪುರಂನಲ್ಲಿ ಜನಿಸಿದ ಐಶ್ವರ್ಯಾ, ಎಂಬಿಬಿಎಸ್ ಪದವೀಧರೆ. ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. 2017ರಲ್ಲಿ ತೆರೆಕಂಡ ನಂದುಕಳುದೆ ನಾಟಿಲ್ ಒರಿದವೇಳ ಸಿನಿಮಾ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಮಾಯಾನದಿ ಸಿನಿಮಾದಲ್ಲಿನ ಉತ್ತಮ ನಟನೆಗಾಗಿ Filmfare Award ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ವಾರಥಾನ್, ಪೊನ್ನಿಯನ್ ಸೆಲ್ವನ್, ಗಟ್ಟ ಕುಸ್ತಿ ಹಾಗೂ ಗಾರ್ಗಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ, (ಏಜೆನ್ಸೀಸ್).