ಈಕೆ ನ್ಯಾಚುರಲ್​... 25 ಕೋಟಿ ಬಜೆಟ್​ ಚಿತ್ರವನ್ನು 300 ಕೋಟಿ ಕ್ಲಬ್​ಗೆ ಸೇರಿಸಿದ​ ಮಮಿತಾ ನಟನೆಗೆ ನಿರ್ದೇಶಕರು ಫುಲ್​ ಮಾರ್ಕ್ಸ್​ | Mamita Baiju

ನಟಿ ಕಲ್ಯಾಣಿ ಪ್ರಿಯದರ್ಶನ್​ (ಎಡ), ನಟಿ ಮಮಿತಾ ಬೈಜು (ಬಲ)
ನಟಿ ಕಲ್ಯಾಣಿ ಪ್ರಿಯದರ್ಶನ್​ (ಎಡ), ನಟಿ ಮಮಿತಾ ಬೈಜು (ಬಲ)
Published on
ಕೊಚ್ಚಿ: ಈ ವರ್ಷ ಬರೋಬ್ಬರಿ ಮೂರು ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನೇ ನೀಡುವ ಮೂಲಕ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್​ ಅವರ ದಾಖಲೆಯನ್ನು ಸರಿಗಟ್ಟಿದ ಮಲಯಾಳಂನ ಯುವ ಜನಪ್ರಿಯ ನಟಿ ಮಮಿತಾ ಬೈಜು (Mamitha Baiju) ಸದ್ಯ ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಮಮಿತಾ ನಟನೆಯ ಇತ್ತೀಚಿನ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕೆಲವೇ ವಾರಗಳ ಹಿಂದೆ ಬಿಡುಗಡೆಗೊಂಡ 'ಬೆತ್ಲೆಹೆಮ್ ಫ್ಯಾಮಿಲಿ ಯೂನಿಟ್' ಚಿತ್ರವು ಇದೀಗ 300 ಕೋಟಿ ಕ್ಲಬ್​ ಸೇರಿ ಹೊಸ ದಾಖಲೆಯನ್ನು ನಿರ್ಮಿಸಿದೆ.

25 ಕೋಟಿ ಬಜೆಟ್​

ಮಾಲಿವುಡ್​ನಲ್ಲಿ ಸಣ್ಣ-ಪುಟ್ಟ ಪಾತ್ರಗಳಿಂದ ಕರಿಯರ್​ ಆರಂಭಿಸಿದ ಮಮಿತಾ ಬೈಜು ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನೋಡಿದ್ದಾರೆ. ಗಿರೀಶ್​ ಎಡಿ ನಿರ್ದೇಶನದ ಹಾಗೂ ನಟ ನಿವಿನ್ ಪೌಲಿ ಮತ್ತು ಮಮಿತಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಬೆತ್ಲೆಹೆಮ್ ಫ್ಯಾಮಿಲಿ ಯೂನಿಟ್' ಸದ್ಯ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 305 ಕೋಟಿ ರೂ. ಗಳಿಸಿದೆ. ಆ.21ರಂದು ತೆರೆಕಂಡ ಈ ಸಿನಿಮಾ ಇಂದಿಗೂ ಚಿತ್ರಮಂದಿರಗಳಲ್ಲಿ ಸಿನಿಪ್ರಿಯರಿಂದ ತುಂಬಿ ತುಳುಕುತ್ತಿದ್ದು, ನಿರೀಕ್ಷೆಗೂ ಮೀರಿದ ಗಳಿಕೆಗೆ ಮುಖ್ಯ ಕಾರಣವಾಗಿದೆ. ಚಿತ್ರಕ್ಕೆ ಸಿಕ್ಕಿರುವ ಅಪಾರ ಮೆಚ್ಚುಗೆ, ಪ್ರಶಂಸೆಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕರು, ಮಮಿತಾ ನಟನೆಯನ್ನು ಗುಣಗಾನ ಮಾಡಿದ್ದಾರೆ.
"ಮಮಿತಾ ಓರ್ವ ನ್ಯಾಚುರಲ್​ ನಟಿ. ಸೂಪರ್​ ಶರಣ್ಯ ಚಿತ್ರದಲ್ಲಿ ಆಕೆಯೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆಗಲೇ ಹೇಳಿದ್ದೆ, ಹೀಗೊಂದು ಸಿನಿಮಾ ನಿಮ್ಮೊಟ್ಟಿಗೆ ಮಾಡುತ್ತೀನಿ ಅಂತ. ಅನಿರೀಕ್ಷಿತ ಎನ್ನುವಂತೆ, ಮಮಿತಾ ನಟಿಸಿದ ಎರಡೂ ಚಿತ್ರಗಳು ಒಂದೊಂದು ವಾರಗಳ ಅವಧಿಯಲ್ಲಿ ರಿಲೀಸ್ ಆಯಿತು. ಆದರೂ ಪರವಾಗಿಲ್ಲ, ವಿಶ್ವನಾಥ್ ಅಂಡ್​ ಸನ್ಸ್​ ಚಿತ್ರಕ್ಕಿಂತ ನಮ್ಮ ಚಿತ್ರ ಭಿನ್ನವಾಗಿತ್ತು. ನಮ್ಮದು ರೊಮ್ಯಾಂಟಿಕ್​-ಕಾಮಿಡಿ ಸಿನಿಮಾವಾದ ಕಾರಣ, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ" ಎಂದರು.

ನಟಿ ಕಲ್ಯಾಣಿ ಚಿತ್ರದ ದಾಖಲೆ ಬ್ರೇಕ್​

ಇನ್ನು, ಮಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವು, ನಟಿ ಕಲ್ಯಾಣಿ ಪ್ರಿಯದರ್ಶನ್​ ಅಭಿನಯದ ಲೋಕಃ ಚಾಪ್ಟರ್ 1 ದಾಖಲೆಯನ್ನು ಹಿಂದಿಕ್ಕಿದೆ. 300 ಕೋಟಿ ಕ್ಲಬ್​ ಸೇರಿ ತನ್ನದೇ ದಾಖಲೆಯನ್ನು ಮಲಯಾಳಂ ಚಿತ್ರರಂಗದಲ್ಲಿ ಬೆಂಚ್​ ಮಾರ್ಕ್ ಆಗಿ ಸೆಟ್​ ಮಾಡಿದ್ದ ಕಲ್ಯಾಣಿ ಚಿತ್ರವನ್ನು ಇದೀಗ ಮಮಿತಾ ಹಿಂದಿಕ್ಕಿದ್ದಾರೆ. ಕೇವಲ 25 ಕೋಟಿ ಬಜೆಟ್​ನಲ್ಲಿ ತಯಾರಾದ ಬೆಥ್ಲೆಹೆಮ್​ ಕುಟುಂಬ ಯೂನಿಟ್​ ಈಗ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 305 ಕೋಟಿ ರೂ. ಗಡಿದಾಟಿ ಹೋಗಿದೆ. ಚಿತ್ರವು ಶೀಘ್ರವೇ ಜನಪ್ರಿಯ ಒಟಿಟಿ ಪ್ಲಾಟ್​ಫಾರ್ಮ್​ ಆದ ಜಿಯೋ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗುವ ಮುನ್ಸೂಚನೆಯಿದೆ,(ಏಜೆನ್ಸೀಸ್). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net