ಒಟಿಟಿಗಿಲ್ಲ ಮರಕ್ಕರ್; ಚಿತ್ರಮಂದಿರಗಳಲ್ಲೇ ಬಿಡುಗಡೆ...

pic dg
Published on

ಮೋಹನ್ ಲಾಲ್ ಅಭಿನಯದ ‘ಮರಕ್ಕರ್ - ಅರಬ್ಬಿಕಡಲಿಂಟೆ ಸಿಂಹಂ’ ಚಿತ್ರದ ಸಮಸ್ಯೆ ಕೊನೆಗೂ ಬಗೆಹರಿದಿದೆ. ಚಿತ್ರಮಂದಿರಗಳಿಗಿಂತ ಮುನ್ನ ನೇರವಾಗಿ ಒಟಿಟಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಈಗ ಚಿತ್ರವು ಡಿಸೆಂಬರ್ 02ರಂದು ಚಿತ್ರಮಂದಿರಗಳಲ್ಲೇ ನೇರವಾಗಿ ಬಿಡುಗಡೆಯಾಗಲಿದೆ.

‘ಮರಕ್ಕರ್’ ಕಳೆದ ವರ್ಷ ಮಾರ್ಚ್​ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ. ಅಷ್ಟರಲ್ಲಿ ಕರೊನಾ ಬಂತು. ಚಿತ್ರ ಮುಂದಕ್ಕೆ ಹೋಯಿತು. ಹೀಗೆ ಸಾಕಷ್ಟು ಬಾರಿ ಮುಂದೂಡಲ್ಪಟ್ಟ ಚಿತ್ರವು, ಈಗ ಬಿಡುಗಡೆಯಾಗುವುದಕ್ಕೇನೋ ತಯಾರಿದೆ. ಆದರೆ, ನಿರ್ವಪಕರು ಮತ್ತು ಪ್ರದರ್ಶಕರ ನಡುವೆ ದುಡ್ಡು ಹಂಚಿಕೆಯ ವಿಚಾರದಲ್ಲಿ ತಕರಾರು ಎದ್ದಿತ್ತು. ಟಿಕೆಟ್ ಹಣದಲ್ಲಿ ಯಾರು ಎಷ್ಟು ಪಡೆಯಬೇಕು ಎಂಬ ವಿಷಯ ಇತ್ಯರ್ಥವಾಗದೆ, ನಿರ್ವಪಕರು ಚಿತ್ರವನ್ನು ನೇರವಾಗಿ ಒಟಿಟಿಯಲ್ಲೇ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು.

ಬರೀ ‘ಮರಕ್ಕರ್’ ಒಂದೇ ಅಲ್ಲ, ಮೋಹನ್ ಲಾಲ್ ಅಭಿನಯದ ಐದು ಚಿತ್ರಗಳು ಚಿತ್ರಮಂದಿರಗಳನ್ನು ಬಿಟ್ಟು, ನೇರವಾಗಿ ಒಟಿಟಿಯಲ್ಲೇ ಬರಲಿದೆ ಎಂದು ಸುದ್ದಿಯಾಗಿತ್ತು. ಇದರಿಂದ ಚಿತ್ರಮಂದಿರದವರು ಸ್ವಲ್ಪ ಶೇಕ್ ಆಗಿದ್ದು ಸುಳ್ಳಲ್ಲ. ಕೊನೆಗೆ ರಾಜಿ ಪಂಚಾಯ್ತಿ ಆಗಿ, ‘ಮರಕ್ಕರ್’ ಚಿತ್ರವನ್ನು ಚಿತ್ರಮಂದಿರದಲ್ಲೇ ಮೊದಲು ನೇರವಾಗಿ ಬಿಡುಗಡೆ ಮಾಡುವ ತೀರ್ವನವಾಗಿದೆ. ಹಾಗಾದರೆ, ಇನ್ನುಳಿದ ನಾಲ್ಕು ಚಿತ್ರಗಳು? ಅದು ಸಹ ಮೊದಲು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net