Love Mocktail 2ಗೆ ಮೊದಲ ದಿನದ ಪ್ರತಿಕ್ರಿಯೆ ಹೇಗಿದೆ? ನಿರ್ಮಾಪಕಿ ಮಿಲನಾ ಹೇಳಿದ್ದೇನು?

Published on
ಬೆಂಗಳೂರು: 'ಲವ್ ಮಾಕ್ಟೆಲ್ 2' ಸಿನಿಮಾ ಫೆಬ್ರವರಿ 11 ರಂದು ಬಿಡುಗಡೆ ಆಗಿದ್ದು, ರಾಜ್ಯದಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಬಹುತೇಕ ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಆಗಿದ್ದು, ಬೆಂಗಳೂರಿನಲ್ಲಿ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಮತ್ತು ನಾಯಕಿ ಮಿಲನಾ ನಾಗರಾಜ್ ಅವರಿಗೇ ಯಾವ ಥಿಯೇಟರ್​ನಲ್ಲೂ ಸೀಟು ಸಿಗಲಿಲ್ಲವಂತೆ. ಇದೇ ಚಿತ್ರದ ನಿರ್ಮಾಪಕಿಯೂ ಆಗಿರುವ ನಟಿ ಮಿಲನಾ ನಾಗರಾಜ್ ಅವರು ತಮ್ಮ ಸಿನಿಮಾ ಮೊದಲ ದಿನದಂದು ಜನರಿಂದ ಪಡೆದ ಪ್ರತಿಕ್ರಿಯೆ ಕಂಡು ದಿಲ್ ಖುಷಿ ಆಗಿದ್ದಾರೆ. ನಟಿ ಮಿಲನಾ ನಾಗರಾಜ್, ''ನಿನ್ನೆ ರಾತ್ರಿ 22 ಪ್ರೀಮಿಯರ್ ಶೋಗಳನ್ನು ಹಾಕಿದ್ದೇವು.
ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಅದೇ ನಮಗೆ ಪಾಸಿಟಿವ್ ಎನರ್ಜಿ ತುಂಬಿತ್ತು. ಇಂದು ಬೆಳಿಗ್ಗೆಯಿಂದಂತೂ ಎಲ್ಲೆಡೆ ಚಿತ್ರಮಂದಿರಗಳು ಫುಲ್ ಆಗಿವೆ. ನಮಗೆ ಸೀಟು ಸಿಗಲಿಲ್ಲ,'' ಎಂದು ಮಾದ್ಯಮಗಳಿಗೆ ಮಿಲನಾ ತಿಳಿಸಿದರು. ''ಲವ್ ಮಾಕ್ಟೆಲ್' ಗಿಂತಲೂ 'ಲವ್ ಮಾಕ್ಟೆಲ್ 2' ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ, ಅದಂತೂ ಬಹಳ ದೊಡ್ಡ ಹೊಗಳಿಕೆ ನಮಗೆ. ನಿರ್ಮಾಪಕಿಯಾಗಿ ನಾನು ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸೇಫ್ ಆಗಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಒಳ್ಳೆಯ ಬೆಲೆಗೆ ಸಿನಿಮಾವನ್ನು ಮಾರಾಟ ಮಾಡಿದ್ದೇವೆ. ಮೊದಲ ದಿನವೇ ಇಷ್ಟು ಜನ ಬಂದಿರುವುದು ನೋಡಿ ಗೆದ್ದಂತೆ ಎನಿಸುತ್ತಿದೆ'' ಎಂದರು ಮಿಲನಾ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net