ಮಿಲನ ಖ್ಯಾತಿಯ ಪಾರ್ವತಿ ಮೆನನ್ 'ಪಾರ್ವತಿ ತಿರುವೋತ್ತು' ಆಗಿದ್ಯಾಕೆ?; ನಟಿಯ ದಿಟ್ಟ ನಿರ್ಧಾರದ ಹಿಂದಿದೆ ಅಸಲಿ ಸತ್ಯ..Parvathy Thiruvothu

Parvathy  menon to Parvathy Thiruvothu
Parvathy menon to Parvathy Thiruvothu
Published on

ಪ್ರಮುಖ ಮುಖ್ಯಾಂಶಗಳು

  • ಪಾರ್ವತಿ ಮೆನನ್ ಎಂದು ಕರೆಯಲಾಗುತ್ತಿದ್ದ ಹೆಸರನ್ನು ಬದಲಾಯಿಸಿಕೊಂಡಿದ್ದು ಏಕೆ?
  • ತನ್ನ ಹೆಸರಿನೊಂದಿಗೆ ಜಾತಿ ಸೂಚಿಸೋದು ಇಷ್ಟವಿಲ್ಲ ಎಂದಿದ್ದ ನಟಿ ಪಾರ್ವತಿ ಮೆನನ್
  • ಬಣ್ಣ, ಜಾತಿ ಶಾಲಾ-ಕಾಲೇಜು ದಾಖಲೆಯಲ್ಲಿ ಉಲ್ಲೇಖಿಸೋದು ಇಷ್ಟವಿಲ್ಲ ಎಂದ ಪಾರ್ವತಿ
Parvathy menon to Parvathy Thiruvothu: ಪಾರ್ವತಿ ಮೆನನ್​ ಅಲ್ಲಲ್ಲ, ಪಾರ್ವತಿ ತಿರುವೋತ್ತು ವಿಭಿನ್ನತೆ, ಸಿನಿಮಾ ಆಯ್ಕೆ ಹಾಗೂ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ತಂಗಲಾನ್​​, ಚಾರ್ಲಿ, ಮಿಲನ, ಎನ್ನು ನಿಂತೇ ಮೊಯ್ದೀನ್, ವಂಡರ್​ ವುಮೆನ್​ ಸೇರಿದಂತೆ ಹಲವು ಸಿನಿಮಾ ಸಾಕ್ಷಿ...ಇಂದಿಗೂ ಅನ್ಯಾಯದ ವಿರುದ್ಧ ಮಾತನಾಡುವ ಪಾರ್ವತಿ ಮೆನನ್​​ ಪಾರ್ವತಿ ತಿರುವೋತ್ತು ಆಗಿದ್ದು ಹೇಗೆ, ಇದರ ಹಿಂದಿರುವ ಕಾರಣವೇನು ಎನ್ನುವದಕ್ಕೆ ಡಿಟೇಲ್ಸ್​​ ಇಲ್ಲಿದೆ.
ಸಾಮಾನ್ಯವಾಗಿ ಸಿನಿಮಾ ರಂಗಕ್ಕೆ ಬರುವ ನಟಿಯರು ಅಥವಾ ನಟರು ತಮ್ಮ ಈ ಹಿಂದೆ ಇದ್ದ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ದಿವ್ಯಾ ಸ್ಪಂದನ ಬದಲಾಯಿ ರಮ್ಯಾ ಆದದ್ದು, ಶಿವಾಜಿ ರಾವ್ ಗಾಯಕ್ವಾಡ್ ಇದ್ದದ್ದು ರಜನೀ ಕಾಂತ್ ಆಗಿದ್ದು, ಭಾನುರೇಖಾ ಗಣೇಶನ್ ಎಂದು ಹೆಸರಿಟ್ಟುಕೊಂಡಿದ್ದ ಚೆಲ್ಲಾಟ ಖ್ಯಾತಿಯ ನಟಿ ರೇಖಾ ಆಗಿದ್ದು, ಕತ್ರಿನಾ ಟರ್ಕಾ ಎಂದಿದ್ದ ಹೆಸರು ಕತ್ರಿನಾ ಕೈಫ್ ಆಗಿದ್ದು ಇದೆ.

ಮೆನನ್​ ಹೆಸರು ಬದಲಾಗಿದ್ದು ಯಾಕೆ?

ವೃತ್ತಿ ಜೀವನಕ್ಕಾಗಿ ಹಲವು ಸಿನಿಮಾ ನಟ ಮತ್ತು ನಟಿಯರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದು ಇದೆ. ಆದರೆ ಸಿನಿರಂಗದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ಸ್ತ್ರೀದ್ವೇಷದ ವಿರುದ್ಧ ಡಬ್ಲ್ಯುಸಿಸಿ ಸಂಘಟನೆಯ ಮೂಲಕ ಸಕ್ರಿಯವಾಗಿ ಹೋರಾಡುತ್ತಿರುವ ಪಾರ್ವತಿ ತಿರುವೋತ್ತು , ತಮ್ಮ ಹೆಸರಿನೊಂದಿಗೆ ಇದ್ದ ಮೆನನ್​ ಎಂಬ ಪದ ಜಾತಿಯನ್ನು ಸೂಚಿಸುತ್ತದೆ ಎನ್ನುವ ಸಲುವಾಗಿ ಹಾಗೆ ಕರೆಯುವುದನ್ನು ಕೈ ಬಿಡಿ ಎಂದು ಮನವಿ ಮಾಡಿಕೊಂಡಿದ್ದರು
ನನ್ನೊಂದಿಗೆ ಜಾತಿ ಉಪನಾಮ ಉಲ್ಲೇಖವಾಗೋದು ಇಷ್ಟವಿಲ್ಲ. ನನ್ನ ಶಾಲೆಯ ದಾಖಲೆಯಲ್ಲೂ ಜಾತಿಯನ್ನು ಬರೆಯೋದಿಲ್ಲ ಎಂದು ಮೆನನ್ ಎನ್ನುವುದನ್ನು ತೆಗೆಸಿ ಹಾಕಿದ್ದರು. ಇದು ನಿಜಕ್ಕೂ ಅಚ್ಚರಿ.ಸಾಮಾನ್ಯವಾಗಿ ಜಾತಿ ಎಂದು ಬಂದಾಗ ತೋರ್ಪಡಿಸಿಕೊಳ್ಳೋರು ಹೆಚ್ಚು, ಆದರೆ ಈ ನಟಿ ಮಾತ್ರ ಇದಕ್ಕೆ ವಿರುದ್ಧ.


ಪಾರ್ವತಿ ಹೇಳಿದ್ದಿಷ್ಟು

' ಪಾರ್ವತಿ ಮೆನನ್ ಎಂದು ಕರೆಯುವುದು ಇಷ್ಟವಿಲ್ಲ. ನಾನು ಕೇರಳೀಯಳಾಗಿರುವುದರಿಂದ ಮೆನನ್ ಎಂಬುದು ಪತ್ರಕರ್ತರೊಬ್ಬರು ತಪ್ಪಾಗಿ ಭಾವಿಸಿ ಬರೆದಿದ್ದರು. ನನ್ನ ಕುಟುಂಬದ ಹೆಸರು ಪಾರ್ವತಿ ತಿರುವೋತ್ತು ಕಟ್ಟುವಟ್ಟ. ಜನನ ಪ್ರಮಾಣಪತ್ರದಲ್ಲಿಯೂ ನಾವು ಜಾತಿ ಉಪನಾಮವನ್ನು ಉಲ್ಲೇಖಿಸಿಲ್ಲ. ಅದು ಇಷ್ಟವಿಲ್ಲ' ಎಂದು ಹೇಳಿದ್ದರು.
ಎನ್ನು ನಿಂತೇ ಮೊಯ್ದಿನ್​ ಸಿನಿಮಾ ರಿಲೀಸ್ ವೇಳೆ ಪಾರ್ವತಿ ಹೇಳಿದ್ದು ಹೀಗೆ, 'ಯಾವುದೇ ಧರ್ಮ ಅಥವಾ ಜಾತಿಯ ಹೆಸರುಗಳಿಗಿಂತ ಮನುಷ್ಯನ ವ್ಯಕ್ತಿತ್ವ ಮತ್ತು ಸಂಸ್ಕಾರವೇ ಮುಖ್ಯ. ನಾನು ನಾಸ್ತಿಕಳೇನೂ ಅಲ್ಲ. ಸರ್ಕಾರಿ ದಾಖಲೆಗಳು ಅಥವಾ ನಮೂನೆಗಳಲ್ಲಿ ಜಾತಿ ಅಥವಾ ಧರ್ಮದ ಕಾಲಮ್ ಭರ್ತಿ ಮಾಡುವುದಿಲ್ಲ ಎಂದಿದ್ದಾರೆ. ಒಂದು ಜಾತಿ ಅಥವಾ ಧರ್ಮದ ಉಲ್ಲೇಖದಿಂದ ತನಗೆ ತಾರತಮ್ಯ ಅನುಭವ ಎದುರಾಗುತ್ತದೆ ಎಂದಾದರೆ ತಾನು ಅದನ್ನು ನಮೂದಿಸುವುದಿಲ್ಲ' ಎಂದು ಹೇಳಿದ್ದರು.
'ನಾನು ಕೇವಲ ನನ್ನ ಲಿಂಗ ಅಥವಾ ನನ್ನ ಚರ್ಮದ ಬಣ್ಣವಷ್ಟೇ ಅಲ್ಲ. ನಾವೆಲ್ಲರೂ ಎಲ್ಲದರ ಸಮ್ಮಿಶ್ರಣ ಎಂದು ನಾನು ನಂಬುತ್ತೇನೆ. ನನ್ನ ಜೀವನದ ಗುಣಮಟ್ಟ ಹೇಗಿದೆ ಅಥವಾ ಕೆಲಸದಲ್ಲಿ ನನ್ನ ಅರ್ಹತೆ ಏನು ಎಂಬುದನ್ನು ನಿರ್ಧರಿಸುವಲ್ಲಿ ಇವುಗಳಲ್ಲಿ ಯಾವ ಅಂಶವೂ ಮೌಲ್ಯಯುತವಾಗಿದೆ ಎಂದು ನಾನು ನಂಬುವುದಿಲ್ಲ. ಏಕೆಂದರೆ, ಮೊದಲು ನಾನು ಒಬ್ಬ ಮನುಷ್ಯಳು. ಒಬ್ಬ ವ್ಯಕ್ತಿಯಲ್ಲಿ ಮುಖ್ಯವಾದುದು ಆತನ 'ಚಾರಿತ್ರ್ಯ' ಎಂದು ನಾನು ನಂಬುತ್ತೇನೆ. ನಾನು ಅದರಲ್ಲಿಯೇ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ' ಎಂದುಈ ಹಿಂದೆ ಹೇಳಿದ್ದರು.


ಏನಿದು ಮೆನನ್​​, ಏನನ್ನು ಉಲ್ಲೇಖಿಸುತ್ತದೆ?

'ಮೆನನ್' ಎನ್ನುವುದು ಕೇರಳದ ನಾಯರ್ ಸಮುದಾಯದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಒಂದು ಪ್ರಮುಖ ಉಪನಾಮವಾಗಿದೆ. ಈ ಹಿಂದೆ ಕೇರಳದ ಹಿಂದಿನ ರಾಜರು ಅಂದರೆ ಕೊಯಿಕ್ಕೋಡ್‌ನ ಜಾಮೋರಿನ್ ಮತ್ತು ಕೊಚ್ಚಿಯ ಮಹಾರಾಜರು ಆಡಳಿತಾತ್ಮಕ ಸೇವೆಗಳು, ಲೆಕ್ಕಪತ್ರ ನಿರ್ವಹಣೆ ಹಾಗೂ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಸಮರ್ಥ ನಾಯರ್ ಸಮುದಾಯದ ವ್ಯಕ್ತಿಗಳಿಗೆ ಈ ಗೌರವಯುತ ಬಿರುದನ್ನು ನೀಡುತ್ತಿದ್ದರು.
ಈ ಬಿರುದು ಮತ್ತು ಉಪನಾಮವು ಕಾಲಾ ಕ್ರಮೇಣ ಕೇರಳದ ನಾಯರ್ ಸಮುದಾಯಕ್ಕೆ ಸೇರಿದ್ದು, ಇತಿಹಾಸದಲ್ಲಿ ಇವರು ಆಡಳಿತ ಮತ್ತು ಜಮೀನ್ದಾರರ ವರ್ಗಕ್ಕೆ ಸೇರಿದ್ದರು.

ಭಾವನಾ ಮೆನನ್ಗೆ ಬೆಂಬಲ

ಸಿನಿರಂಗದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ಸ್ತ್ರೀದ್ವೇಷದ ವಿರುದ್ಧ ಡಬ್ಲ್ಯುಸಿಸಿ ಸಂಘಟನೆಯ ಮೂಲಕ ಸಕ್ರಿಯವಾಗಿ ಹೋರಾಡುತ್ತಿದ್ದಾರೆ.ನಟಿ ಭಾವನಾ ಪ್ರಕರಣದ ಬೆಂಬಲನ್ಯಾಯಕ್ಕಾಗಿ ಹೋರಾಟ: 2017ರ ಮಲಯಾಳಂ ನಟಿ (ಭಾವನಾ ಮೆನನ್) ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ನಿಂತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸತತವಾಗಿ ಆಗ್ರಹಿಸುತ್ತಾ ಬಂದಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net