ಮತ್ತೆ ಶುರುವಾಯ್ತು ಮೆರ್ರಿ ಕ್ರಿಸ್​ಮಸ್​

Kathrina
Published on

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಕಾಂಬಿನೇಷನ್​ನ ‘ಮೆರ್ರಿ ಕ್ರಿಸ್​ವುಸ್’ ಸಿನಿಮಾ ಕಳೆದ ವರ್ಷವೇ ಶುರುವಾದರೂ, ಶೂಟಿಂಗ್ ಮಾತ್ರ ಜೋರಾಗಿ ಸಾಗಿರಲಿಲ್ಲ. ಇದೀಗ ಸುದೀರ್ಘ ಒಂದೂವರೆ ತಿಂಗಳ ಚಿತ್ರೀಕರಣಕ್ಕೆ ತಂಡ ಚಾಲನೆ ನೀಡಿದೆ. ಮುಂದಿನ 45 ದಿನಗಳಲ್ಲಿ ಎರಡನೇ ಹಂತದ ಶೂಟಿಂಗ್ ಮುಗಿಸುವ ಲೆಕ್ಕಾಚಾರದಲ್ಲಿದೆ. ಶೀರ್ಷಿಕೆಯೇ ಹೇಳುವಂತೆ ಕ್ರಿಸ್​ವುಸ್ ಸಂದರ್ಭದಲ್ಲಿ ನಡೆಯುವ ಕಥೆ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆಯಂತೆ.

ಈ ಚಿತ್ರಕ್ಕೆ ಶ್ರೀರಾಮ್ ರಾಘವನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಮುಂಬೈನಲ್ಲಿ ಭವ್ಯವಾದ ಮನೆಯ ಸೆಟ್ ಹಾಕಿ ಕಳೆದೊಂದು ವಾರದಿಂದ ಶೂಟಿಂಗ್ ಸಹ ನಡೆಯುತ್ತಿದ್ದು, ಸಂಪೂರ್ಣ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಇದೆಲ್ಲದಕ್ಕಿಂತ ಅಚ್ಚರಿ ವಿಚಾರ ಏನೆಂದರೆ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ನೆಗೆಟಿವ್ ಪಾತ್ರ ಮಾಡುತ್ತಿದ್ದಾರಂತೆ. ಜೂನ್​ನಲ್ಲಿ ಚಿತ್ರದ ಶೂಟಿಂಗ್ ಮುಗಿಸಿಕೊಳ್ಳಲಿರುವ ತಂಡ, ಕ್ರಿಸ್​ವುಸ್​ಗೆ ಚಿತ್ರವನ್ನು ತೆರೆಗೆ ತರಲಿದೆ. ‘ಫೋನ್ ಬೂತ್’ ಶೂಟಿಂಗ್ ಮುಗಿಸಿರುವ ಕತ್ರಿನಾ, ಸಲ್ಮಾನ್ ಜತೆಗೆ ‘ಟೈಗರ್ 3’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇತ್ತ ಏಳೆಂಟು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಸಹ ಬಿಜಿಯಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net