More

    ಡೀಸೆಲ್ ಬೆಲೆ ಲೀಟರ್​ಗೆ 25 ರೂಪಾಯಿ ಹೆಚ್ಚಳ; ಚಿಂತೆ ಯಾರಿಗೆ?

    ನವದೆಹಲಿ: ಈ ಹಿಂದೆಯೇ ಸುಳಿವು ಇದ್ದಂತೆ ತೈಲ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಡೀಸೆಲ್​ ದರ ಲೀಟರ್​ವೊಂದಕ್ಕೆ 25 ರೂಪಾಯಿ ಏರಿದೆ. ಅದಾಗ್ಯೂ ಚಿಲ್ಲರೆಯಾಗಿ ಡೀಸೆಲ್ ಭರಿಸಿಕೊಳ್ಳುವ ವಾಹನ ಮಾಲೀಕರು ಚಿಂತೆ ಮಾಡುವಂತಿಲ್ಲ. ಹಾಗಾದರೆ, ಈ ಬೆಲೆ ಏರಿಕೆಯ ಚಿಂತೆ ಯಾರಿಗೆ?

    ಹೌದು.. ಡೀಸೆಲ್​​ ದರದಲ್ಲಿ ಪ್ರತಿ ಲೀಟರ್​ಗೆ 25 ರೂ. ಹೆಚ್ಚಳವಾಗಿದ್ದರೂ ಚಿಲ್ಲರೆಯಾಗಿ ಡೀಸೆಲ್​ ಭರಿಸಿಕೊಳ್ಳುವ ವಾಹನ ಮಾಲೀಕರಿಗೆ ಅದರ ಬಿಸಿ ಸದ್ಯಕ್ಕಂತೂ ತಟ್ಟುವಂತಿಲ್ಲ. ಏಕೆಂದರೆ ಈ ಬೆಲೆ ಏರಿಕೆ ಸದ್ಯಕ್ಕೆ ಸಗಟು ಮಾರಾಟಗಾರರಿಗಷ್ಟೇ ಅನ್ವಯಿಸುವಂಥದ್ದು.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಶೇ. 40ರಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಡೀಸೆಲ್​ ಸಗಟು ಮಾರಾಟ ಬೆಲೆಯಲ್ಲಿ ಪ್ರತಿ ಲೀಟರ್​ಗೆ ಈ ಥರ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದಾಗ್ಯೂ ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಮೂಲಗಳು ತಿಳಿಸಿವೆ.

    ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮಳೆ; ಎಷ್ಟು ದಿನ?

    ಮೇಲ್ಸೇತುವೆ ಮೇಲೆ ಸರಣಿ ಅಪಘಾತ, 9 ಕಾರುಗಳು ಜಖಂ; ವೃದ್ಧೆಗೆ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts