

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಮೇಘಶ್ರೀ ಇದೀಗ ಕೃಷ್ಣನ ಮನದರಸಿ ರುಕ್ಮಿಣಿಯಾಗಿದ್ದಾರೆ. ಅಂದರೆ, ‘ಓಲ್ಡ್ ಮಾಂಕ್’ ಚಿತ್ರದಲ್ಲಿ ಹೊಸ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎಂ.ಜಿ. ಶ್ರೀನಿವಾಸ್ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ. ಇದೀಗ ಅತಿಥಿ ಪಾತ್ರವೊಂದರಲ್ಲಿ ನಟಿಸುವ ಮೂಲಕ ಮೇಘಶ್ರೀ ಸಹ ತಂಡದ ಭಾಗವಾಗಿದ್ದಾರೆ.
ಸಿದ್ಧಿ ಎಂಟರ್ಟೈನ್ವೆುಂಟ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಕೃಷ್ಣನಾಗಿ ನಟ ಸುನೀಲ್ ರಾವ್ ಸಹ ಅಭಿನಯಿಸಿದ್ದಾರೆ. ಈ ಮೊದಲೇ ಅವರ ಲುಕ್ ಸಹ ವಿಶೇಷವಾಗಿತ್ತು. ಇದೀಗ ಸುನೀಲ್ಗೆ ಜೋಡಿಯಾಗಿ ಮೇಘಶ್ರೀ ನಟಿಸಿದ್ದಾರೆ. ನಿಭಾಯಿಸಿದ ಪಾತ್ರದ ಬಗ್ಗೆಯೂ ಹೇಳಿಕೊಂಡಿದ್ದಾರೆ. ‘ರುಕ್ಮಿಣಿ ಅಂದ ತಕ್ಷಣ ಪೌರಾಣಿಕ ಲುಕ್ನಲ್ಲಿ ನನ್ನನ್ನು ತೋರಿಸಿಲ್ಲ. ಬದಲಿಗೆ ಸೆಮಿ ಟ್ರೆಡಿಷನಲ್ ಅವತಾರವಿದೆ. ಕೃಷ್ಣನಿಗೆ ಕಿಟಲೆ ಮಾಡುತ್ತ.. ಹಾಸ್ಯವಾಗಿ ಪಾತ್ರ ಮೂಡಿಬಂದಿದೆ. ಕೇವಲ ಒಂದೇ ದಿನದಲ್ಲಿ ನನ್ನ ಭಾಗದ ಶೂಟಿಂಗ್ ಮುಗಿದಿದೆ’ ಎಂಬುದು ಅವರ ಮಾತು.