ಅಭಿಮಾನಿಗಳಿಗೊಂದು ಸರ್ಪ್ರೈಸ್​ ನೀಡಿದ ಮೇಘನಾ ರಾಜ್: ಏನಿರಬಹುದು ನೀವು ಒಮ್ಮೆ ಗೆಸ್​ ಮಾಡಿ!

Meghana
Published on

ಬೆಂಗಳೂರು: ನಟಿ ಮೇಘನಾ ರಾಜ್​ ಅವರು ಅಭಿಮಾನಿಗಳಿಗೊಂದು ಸರ್ಪ್ರೈಸ್​ ನೀಡಿದ್ದಾರೆ. ಬುಧವಾರ ರಾತ್ರಿ ಇನ್​ಸ್ಟಾಗ್ರಾಂನಿಂದ ಪೋಸ್ಟ್​ ಮಾಡಿರುವ ಚಿರು ಪತ್ನಿ, ಅದರಲ್ಲಿ ಸರ್ಪ್ರೈಸ್​ ಒಂದನ್ನು ರಹಸ್ಯವಾಗಿ ಇಟ್ಟಿದ್ದಾರೆ.

ಆ ಸರ್ಪ್ರೈಸ್​ ಏನೆಂದು ತಿಳಿಯಲು ಅಭಿಮಾನಿಗಳು ನಾಳೆ(ಫೆ.12) ವರೆಗೂ ಕಾಯಬೇಕಾಗಿದೆ. ನಾವು ಕೂಡ ಉತ್ಸುಕರಾಗಿದ್ದೇವೆ. ನಿಮಗೂ ಸರ್ಪ್ರೈಸ್​ ಆಗಿರಲಿದೆ. 2021, ಫೆ. 12ಕ್ಕೆ ಉತ್ಸಾಹಭರಿತ ಸುದ್ದಿಯೊಂದು ಬರಲಿದೆ ಎಂದು ಮೇಘನಾ ಪೋಸ್ಟ್​ ಮಾಡಿದ್ದಾರೆ.

ಮೇಘನಾ ಇನ್​ಸ್ಟಾಗ್ರಾಂ ಪೋಸ್ಟ್​ ಬೆನ್ನಲ್ಲೇ ಅಭಿಮಾನಿಗಳು ಜಾಲತಾಣದಲ್ಲೇ ಚರ್ಚೆಗೆ ಇಳಿದಿದ್ದು, ಸರ್ಪ್ರೈಸ್​ ಏನಿರಬಹುದು ಎಂದು ಊಹಿಸುತ್ತಿದ್ದಾರೆ. ಜೂ.ಚಿರು ಫೋಟೋ ರಿವೀಲ್ ಮಾಡಲಿದ್ದಾರಾ? ಅಥವಾ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರಾ? ಎಂದು ಸರ್ಜಾ ಫ್ಯಾನ್ಸ್ ಕಾಮೆಂಟ್​ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net