‘ಆಚಾರ್ಯ’ ರಿಲೀಸ್ ಮುಂದಕ್ಕೆ; ‘ಪುಷ್ಪ’ ಜತೆ ಮುಖಾಮುಖಿ ಆಗ್ತಾರಾ ಮೆಗಾಸ್ಟಾರ್!

Acharya
Published on

ಹೈದರಾಬಾದ್: ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಆಚಾರ್ಯ‘ ಚಿತ್ರ ಪ್ಲಾನ್​ ಪ್ರಕಾರ ಮೇ 13ಕ್ಕೆ ಬಿಡುಗಡೆ ಆಗಬೇಕಿತ್ತು. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ, ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಸಿನಿಮಾ ಬಿಡುಗಡೆ ಆಗುವುದು ಡೌಟ್​ ಎನ್ನಲಾಗುತ್ತಿದೆ. ಹಾಗಾದರೆ ರಿಲೀಸ್ ಯಾವಾಗ? ಇದಕ್ಕೆ ಉತ್ತರ ಆಗಸ್ಟ್​ ಎಂಬ ಉತ್ತರ ಸಿಗುತ್ತಿದೆ.

ಹೌದು, ಸದ್ಯದ ಸ್ಥಿತಿಗತಿ ನೋಡಿದರೆ, ಚಿತ್ರತಂಡ ಆಗಸ್ಟ್​ ತಿಂಗಳ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಆಗಸ್ಟ್​ನಲ್ಲಿಯೇ ಬಿಡುಗಡೆ ಆಗುವುದು ಪಕ್ಕಾ ಆದರೆ, ಒಂದಷ್ಟು ಸಿನಿಮಾಗಳ ಜತೆಗೆ ಮುಖಾಮುಖಿಗೂ ಆಚಾರ್ಯ ಚಿತ್ರ ಸಿದ್ಧವಾಗಬೇಕಿದೆ. ಈಗಾಗಲೇ ಬಹುಭಾಷೆಗಳಲ್ಲಿ ಅಲ್ಲು ಅರ್ಜುನ್​ ಪುಷ್ಪ ಚಿತ್ರ ಸಿದ್ಧವಾಗುತ್ತಿದೆ. ಆಗಸ್ಟ್ 13ರಂದು ಚಿತ್ರ ಬಿಡುಗಡೆ ಆಗಲು ದಿನಾಂಕ ನಿಗದಿಯಾಗಿದೆ.

ಸದ್ಯ ಇಡೀ ದೇಶದಾದ್ಯಂತ ಕರೊನಾ ಪ್ಯಾಂಡಮಿಕ್ ಇದೆ. ಇನ್ನೆರಡು ತಿಂಗಳ ಬಳಿಕ ಎಲ್ಲವೂ ಸರಿ ಹೋಗಬಹುದು ಎಂಬ ನಿಟ್ಟಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾಗಳೆಲ್ಲವೂ, ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿವೆ. ಈವರೆಗೂ ಅಧಿಕೃತ ಘೋಷಣೆ ಮಾಡಿಲ್ಲ. ಇತ್ತ ಅಭಿಮಾನಿವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಆಚಾರ್ಯ ಚಿತ್ರ ಆಗಸ್ಟ್ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಚಿತ್ರತಂಡ ಮಾತ್ರ ಆ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net