ಮತ್ತೊಂದು ಅವಿಸ್ಮರಣೀಯ ದಿನ; ಲೀಲಾವತಿ ಮನೆಯಲ್ಲಿ ನಟಿಯರ ಸಮಾಗಮ

Leelavathi
Published on

ಬೆಂಗಳೂರು: ಚಂದನವನದ ಹಿರಿಯ ನಟಿಯರೆಲ್ಲ ಸಮಯ ಸಿಕ್ಕಾಗಲೆಲ್ಲ ಒಂದೆಡೆ ಸೇರುತ್ತಾರೆ. ಹಳೆಯ ದಿನಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿರುತ್ತಾರೆ. ಹುಟ್ಟುಹಬ್ಬ, ವಾರ್ಷಿಕೋತ್ಸವ ಹೀಗೆ ಎಲ್ಲ ಸಂಭ್ರಮದಲ್ಲೂ ಒಟ್ಟಿಗೆ ಪಾಲ್ಗೊಳ್ಳುತ್ತಾರೆ. ಇದೀಗ ಹಿರಿಯ ನಟಿ ಲೀಲಾವತಿ ಅವರ ಮನೆಗೆ ತೆರಳಿ ಒಂದಷ್ಟು ಹೊತ್ತು ಕಾಲ ಕಳೆದು ಬಂದಿದ್ದಾರೆ. ನೆಲಮಂಗಲ ಬಳಿಕ ಸೋಲದೇವನಹಳ್ಳಿಯಲ್ಲಿನ ಲೀಲಾವತಿ ಅವರ ತೋಟದ ಮನೆಗೆ ನಟಿಯರಾದ ಭಾರತಿ, ಹೇಮಾ ಚೌಧರಿ, ಶ್ರುತಿ ಭೇಟಿಕೊಟ್ಟು ಉಭಯಕುಶಲೋಪರಿ ವಿಚಾರಿಸಿದ್ದಾರೆ.

ಅಷ್ಟೇ ಅಲ್ಲ ಬಾಳೆ ಎಲೆಯ ಮೇಲೆ ದೊನ್ನೆ ಬಿರಿಯಾನಿ ಸವಿದಿದ್ದಾರೆ. ಒಂದಿಡಿ ದಿನವನ್ನು ಅವರೊಂದಿಗೆ ಕಳೆದು ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಆ ಭೇಟಿಯ ವಿಡಿಯೋ ತುಣುಕನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಶ್ರುತಿ ‘ಮತ್ತೊಂದು ಅವಿಸ್ಮರಣೀಯ ದಿನ’ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net