ಕರೊನಾ ಸಂಕಷ್ಟ: ಶಿವಣ್ಣ ಮನೆಯಲ್ಲಿಂದು ಸಭೆ

Shivarajakumar - Final
Published on

ಹಲವು ತಿಂಗಳುಗಳಿಂದ ಇದೊಂದು ಪ್ರಶ್ನೆ ಇದ್ದೇ ಇದೆ. ಹಿಂದೆಲ್ಲಾ ಕನ್ನಡ ಚಿತ್ರರಂಗ ಸಮಸ್ಯೆಗೆ ಸಿಲುಕಿದಾಗ, ಸಂಕಷ್ಟ ಎದುರಿಸಿದಾಗ ಪರಿಹರಿಸುವುದಕ್ಕೆ ಡಾ. ರಾಜಕುಮಾರ್​, ವಿಷ್ಣುವರ್ಧನ್​, ಅಂಬರೀಶ್​ರಂತಹ ದಿಗ್ಗಜರು ಇದ್ದರು.

ಆದರೆ, ಈಗ ಆ ಮೂವರೂ ಇಲ್ಲ. ಅವರ ಅನುಪಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಬಡವಾಗುತ್ತಿದೆ, ಕನ್ನಡ ಚಿತ್ರರಂಗವನ್ನು ಮುನ್ನಡೆಸುವವರು ಯಾರೂ ಇಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಶಿವರಾಜಕುಮಾರ್​ ಅವರು ಕನ್ನಡ ಚಿತ್ರರಂಗದ ನೇತೃತ್ವ ವಹಿಸುತ್ತಾರಾ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ.

ಈ ಸಂಬಂಧ ಇಂದು ಶಿವರಾಜಕುಮಾರ್​ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕರೊನಾ ಹಾವಳಿಯಿಂದ ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಲಾವಿದರು, ತಂತ್ರಜ್ಱರು ಕೆಲಸ ಇಲ್ಲದೆ ಕಷ್ಟಪಡುತ್ತಿದ್ದಾರೆ. ಈ ಸಂಬಂಧ ಎಲ್ಲಾ ವರ್ಗಗಳ ಸಮಸ್ಯೆ ಹಾಗೂ ಪುನಶ್ಚೇತನದ ಬಗ್ಗೆ ಚರ್ಚಿಸುವುದಕ್ಕೆ ಕನ್ನಡ ಚಲನಚಿತ್ರ ನಿರ್ಮಾಫಕರ ಸಂಘವು ಶಿವರಾಜಕುಮಾರ್​ ಅವರ ಮನೆಯಲ್ಲಿ ಸೇರಿ, ಸಭೆ ನಡೆಸುತ್ತಿದೆ.

ಕನ್ನಡ ಚಿತ್ರರಂಗ ಮುಂದೆ ಏನು ಮಾಡಬೇಕು, ಸಂಕಷ್ಟಕ್ಕೊಳಗಾಗಿರುವವರಿಗೆ ಹೇಗೆ ಸಹಾಯ ಮಾಡಬೇಕು ಹಾಗೂ ಮುಂದಿನ ಚಟುವಟಿಕೆಗಳ ಕುರಿತಾದ ರೂಪುರೇಷೆ ಸಿದ್ಧಪಡಿಸುವುದಕ್ಕೆ ಈ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಏನು ತೀರ್ಮಾನವಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net