More

    ಕರೊನಾದಿಂದ ದೊಡ್ಡ ಪಾಠ ಕಲಿಯುವಂತಾಯಿತು

    ‘ಕರೊನಾ ಎಂಬ ವೈರಸ್ ಬರುವ ಮುನ್ನ, ಮನುಷ್ಯನಿಗೆ ತಾನೆಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಮನಸ್ಥಿತಿ ಇತ್ತು. ಆದರೆ, ನೀನಂದುಕೊಂಡಿದ್ದು ತಪ್ಪು ಎನ್ನುವುದನ್ನು ಕಪಾಳಕ್ಕೆ ಹೊಡೆದು ಅರ್ಥ ಮಾಡಿಸಿತು. ಅದರಿಂದ ಎಲ್ಲರೂ ದೊಡ್ಡ ಪಾಠ ಕಲಿಯುವಂತಾಗಿದೆ …’ ಕರೊನಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ಕರೊನಾ ಜಾಗೃತಿ ಅಭಿಯಾನದ ರಾಯಭಾರಿಯನ್ನಾಗಿ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಿದ್ದು ಗೊತ್ತೇ ಇದೆ.

    ಈ ಅಭಿಯಾನದ ಮೊದಲ ವಿಡಿಯೋ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ರಮೇಶ್ ಹಲವು ವಿಷಯಗಳನ್ನು ಬಹಳ ಸರಳವಾಗಿ ವಿವರಿಸಿದ್ದಾರೆ. ‘ನಾವು ಸದ್ಯಕ್ಕೆ ಲಾಕ್​ಡೌನ್​ನಿಂದ ಮುಕ್ತರಾಗಿದ್ದೇವೆಯೇ ಹೊರತು, ಕರೊನಾದಿಂದ ಮುಕ್ತವಾಗಿಲ್ಲ. ಹಾಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ಈ ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ. ಈ ಕುರಿತು ’ವಿಜಯವಾಣಿ’ಯೊಂದಿಗೆ ಮಾತನಾಡಿದ ರಮೇಶ್ ಅರವಿಂದ್, ‘ನಾನು ಈ ಕೆಲಸವನ್ನು ಒಪ್ಪಿಕೊಂಡಾಗ, ಗಂಭೀರವಾದ ವಿಷಯಗಳನ್ನು ಆಸಕ್ತಿಕರವಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ಇತ್ತು. ಈ ನಿಟ್ಟಿನಲ್ಲಿ ಸಾಕಷ್ಟು ರಿಸರ್ಚ್ ಮಾಡಿ, ಪಾಲಿಕೆ ಕೊಟ್ಟ ಮಾಹಿತಿಯನ್ನು ಒಟ್ಟು ಮಾಡಿ, ಜನರಿಗೆ ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

    ಎರಡು ವಾರಗಳ ಚಿತ್ರೀಕರಣಕ್ಕೆ ಅಕ್ಷಯ್​ ಸಂಭಾವನೆ ಎಷ್ಟು? ಕೇಳಿದರೆ ಬೆಚ್ಚಿಬೀಳ್ತೀರಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts