

ಟ್ವಿಟರ್ನಲ್ಲಿ ಆಗಾಗ ಏನಾದರೊಂದು ಟ್ರೆಂಡ್ ಆಗುತ್ತಲೇ ಇರುತ್ತದೆ. ಇದೀಗ ಕರೊನಾ ಹಾವಳಿಯ ದೊಡ್ಡ ಟ್ರೆಂಡ್ ನಡುವೆ ಮೀಆ್ಯಟ್20 ಸಹ ಟ್ರೆಂಡ್ನಲ್ಲಿದೆ. ಅರೇ ಏನಿದು ಮೀಆ್ಯಟ್20? ಟ್ವಿಟರ್ನಲ್ಲಿ ಸದ್ಯ ಎಲ್ಲರ ಯೌವನದ ದಿನಗಳ ಫೋಟೋ ಕಾಣಿಸುತ್ತಿವೆ. 20ರ ವಯಸ್ಸಿನಲ್ಲಿ ಹೇಗಿದ್ದೆ? ಎಂಬುದನ್ನು ತೋರಿಸಲು ಅಂದಿನ ಫೋಟೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯನಿಂದ ಹಿಡಿದು, ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳೆಲ್ಲರೂ ತಂತಮ್ಮ 20ರ ಹರೆಯದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್ನ ಅನುಪಮ್ ಖೇರ್, ರಣದೀಪ್ ಹೂಡಾ, ವಿವೇಕ್ ಅಗ್ನಿಹೋತ್ರಿ, ಹನ್ಸಲ್ ಮೆಹ್ತಾ, ಟಿಸ್ಕಾ ಚೋಪ್ರಾ, ಅಲಿ ಫೈಝಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಪಾಕಿಸ್ತಾನಿ ಆಟಗಾರ ಶೋಯೆಬ್ ಅಖ್ತರ್ ಸಹ 20ರ ವಯಸ್ಸಲ್ಲಿ ಹೇಗಿದ್ದೆ ಎಂಬುದಕ್ಕೆ ಫೋಟೋ ನೀಡಿದ್ದಾರೆ. ಕನ್ನಡದ ಗಾಯಕ ರಾಜೇಶ್ ಕೃಷ್ಣನ್ 20ರ ಹರೆಯದಲ್ಲಿ ಹೇಗಿದ್ದೆ ಎಂಬುದಕ್ಕೆ ಫೋಟೋ ಸಮೇತ ಸಾಕ್ಷ್ಯ ನೀಡಿದ್ದಾರೆ. ರಾಜಕಾರಣಿ ಎಂ ಬಿ ಪಾಟೀಲ್ ಸಹ ತಮ್ಮ ಹರೆಯದ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.