

ಏಪ್ರಿಲ್‌ನಲ್ಲೇ ಬಿಡುಗಡೆಯಾಗಬೇಕಿದ್ದ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’, ಲಾಕ್‌ಡೌನ್‌ನಿಂದ ಮುಂದಕ್ಕೆ ಹೋಗಿದೆ. ಚಿತ್ರ ಯಾವಾಗ ಬಿಡುಗಡೆ ಎಂದು ಚಿತ್ರತಂಡಕ್ಕೂ ಸ್ಪಷ್ಟತೆ ಇಲ್ಲ. ಎಲ್ಲಾ ಅಂದುಕೊಂಡಂತೆ ಆದರೆ, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಆಗಬಹುದು ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಹೇಳಿದ್ದಾರೆ.
ಇದನ್ನೂ ಓದಿ: 50 ಗರ್ಭಿಣಿಯರಿಗೆ ‘ಅಮೂಲ್ಯ’ ಸೀಮಂತ
ಈ ಮಧ್ಯೆ, ಗುರುವಾರ ಚಿತ್ರದ ಇನ್ನೊಂದು ಸ್ಟಿಲ್ ಬಿಡುಗಡೆಯಾಗಿದೆ. ಪುನೀತ್ ಸಖತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಈ ಫೋಟೋ ತೆಗೆದಿರುವು ರಾಘವೇಂದ್ರ ಬಿ ಕೋಲಾರ. ಚಿತ್ರದ ಸ್ಟಿಲ್ ಫೋಟೋಗ್ರಾರ್ ಆಗಿರುವ ರಾಘವೇಂದ್ರ, ಪುನೀತ್ ಅವರ ಹಲವು ಭಂಗಿಗಳ ಫೋಟೋಗಳನ್ನು ತೆಗೆದಿದ್ದು, ಆ ಪೈಕಿ ಈ ಫೋಟೋ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ಫೋಟೋ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು ‘ಯುವರತ್ನ’ ಚಿತ್ರದ ಸ್ಟ್ ಹಾಫ್ನ ಡಬ್ಬಿಂಗ್ ಮುಗಿದಿದ್ದು, ಮುಂದಿನ ವಾರದಿಂದ ಸೆಕೆಂಡ್ ಹಾಫ್ನ ಡಬ್ಬಿಂಗ್ ಪ್ರಾರಂಭವಾಗಲಿದೆ. ಈ ಮಧ್ಯೆ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ಎರಡು ಹಾಡುಗಳನ್ನು ಯೂರೋಪ್‌ನಲ್ಲಿ ಚಿತ್ರೀಕರಿಸಬೇಕು ಎಂಬುದು ಚಿತ್ರತಂಡದ ಪ್ಲಾನ್ ಆಗಿತ್ತು. ಆದರೆ, ಇದೀಗ ಚಿತ್ರತಂಡವು ಆ ಹಾಡುಗಳ ಚಿತ್ರೀಕರಣವನ್ನು ಸ್ವದೇಶದಲ್ಲೇ ಮಾಡುವುದಕ್ಕೆ ತೀರ್ಮಾನಿಸಿದೆ. ಹಾಡು ಹಾಡಿನ ಚಿತ್ರೀಕರಣ ಗೋವಾದಲ್ಲಿ ನಡೆಯಲಿದ್ದು, ಇನ್ನೊಂದರ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಗಾಳಿಪಟ
‘ಯುವರತ್ನ’ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಸಾಯೇಷಾ ಸೆಹಗಲ್ ನಟಿಸಿದ್ದು, ಮಿಕ್ಕಂತೆ ಧನಂಜಯ್, ದಿಗಂತ್, ಸೋನು ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಸಂತೋಷ್ ಆನಂದರಾಮ್ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.