More

    ಹಿಮಾಚಲ ಪ್ರದೇಶದಲ್ಲಿ ಗಾಳಿಪಟ

    ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರತಂಡದವರು ಇನ್ನುಳಿದ ಅರ್ಧ ಭಾಗದ ಚಿತ್ರೀಕರಣವನ್ನು ಮುಗಿಸುವುದಕ್ಕೆ ಯೂರೋಪ್​ಗೆ ಹೋಗಬೇಕಿತ್ತು. ಪೋಲೆಂಡ್, ಜಾರ್ಜಿಯಾ ಮುಂತಾದ ಕಡೆ ಆಕ್ಷನ್- ಕಟ್ ಹೇಳಬೇಕೆಂದು ಭಟ್ಟರು ತೀರ್ವನಿಸಿಬಿಟ್ಟಿದ್ದರು. ಅಷ್ಟರಲ್ಲಿ ಲಾಕ್​ಡೌನ್ ಆಗಿ, ಅವರ ಯೋಚನೆಗಳೆಲ್ಲಾ ತಲೆಕೆಳಗಾಯಿತು.

    ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಾಸ್ಯನಟ ಮೈಕಲ್ ಮಧು ಹೃದಯಾಘಾತದಿಂದ ನಿಧನ…

    ಇದೀಗ ಯೋಗರಾಜ್ ಭಟ್ ಮತ್ತು ಚಿತ್ರತಂಡದವರು ಫಾರಿನ್ ಬಿಟ್ಟು, ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ‘ನಾವು ಮೊದಲು ಕಥೆ ಮಾಡುವಾಗಲೇ ಉತ್ತರ ಭಾರತದಲ್ಲಿ ಚಿತ್ರೀಕರಣ ಮಾಡಬೇಕು ಎಂದು ಯೋಚಿಸಿದ್ದೆವು. ಆ ನಂತರ ಒಂದಿಷ್ಟು ಬದಲಾವಣೆಗಳಾಗಿ, ಯೂರೋಪ್​ನಲ್ಲಿ ಚಿತ್ರೀಕರಣ ಮಾಡುವ ತೀರ್ವನವಾಯಿತು. ಈಗ ಲಾಕ್​ಡೌನ್​ನಿಂದ ಬೇರೆ ದೇಶಗಳಿಗೆ ಹೋಗುವ ಹಾಗಿಲ್ಲ. ಲಾಕ್​ಡೌನ್ ತೆರವಾದ ನಂತರವೂ ವಿದೇಶ ಪ್ರಯಾಣ ಮಾಡುವ, ಅಲ್ಲಿ ಚಿತ್ರೀಕರಣ ಮಾಡುವ ಆತಂಕ ಇದ್ದೇ ಇದೆ. ಹಾಗಾಗಿ ನಾವು ಮೊದಲು ಯೋಚಿಸಿದಂತೆ, ಹಿಮಾಚಲ ಪ್ರದೇಶದಲ್ಲೇ ಚಿತ್ರೀಕರಣ ಮಾಡಲಿದ್ದೇವೆ’ ಎನ್ನುತ್ತಾರೆ ಯೋಗರಾಜ್ ಭಟ್. ‘ಗಾಳಿಪಟ 2’ ಚಿತ್ರದಲ್ಲಿ ಗಣೇಶ್, ದಿಗಂತ್, ‘ಲೂಸಿಯಾ’ ಪವನ್, ಅನಂತ್ ನಾಗ್ ಮುಂತಾದವರು ನಟಿಸುತ್ತಿದ್ದಾರೆ.

    ಇದನ್ನೂ ಓದಿ: ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ಲಾಕ್​ಡೌನ್ ತೆರವಾದ ಬಳಿಕ ವಿದೇಶಕ್ಕೆ ಹೋಗುವುದೇ ಆತಂಕ. ಯೂರೋಪ್​ನಲ್ಲಿ ನೋಡಿದ ಲೊಕೇಷನ್​ಗೆ ಹಿಮಾಚಲ ಪ್ರದೇಶ ಹೊಂದಾಣಿಕೆ ಆಗುತ್ತದೆ. ಅಲ್ಲಿಯೇ ಶೂಟಿಂಗ್ ಮಾಡಿಕೊಳ್ಳಲಿದ್ದೇವೆ.

    | ಯೋಗರಾಜ್ ಭಟ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts