ಆಸ್ಕರ್ ರೇಸ್‌ನಲ್ಲಿ ಮರಾಠಿ ಸಿನಿಮಾ: ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದ ದಶಾವತಾರ್ | Oscar Awards

Oscar Awards
Oscar Awards
Published on
ಮುಂಬೈ: ಖ್ಯಾತ ಮರಾಠಿ ಚಲನಚಿತ್ರ ನಿರ್ದೇಶಕ ಸುಬೋಧ್ ಖಾನೋಲ್ಕರ್ ಅವರ ದಶಾವತಾರ್ ಸಿನಿಮಾವು 98 ನೇ ಅಕಾಡೆಮಿ ಪ್ರಶಸ್ತಿಗಳ (Oscar Awards) ಅಧಿಕೃತ ಆಸ್ಕರ್ ಸ್ಪರ್ಧೆಯ ಪಟ್ಟಿಯನ್ನು ಪ್ರವೇಶಿಸಿದೆ. ಈ ಮೂಲಕ ಭಾರತೀಯ ಪ್ರಾದೇಶಿಕ ಸಿನಿಮಾಗಳೂ ಸಹ ಆಸ್ಕರ್ ಪ್ರಶಸ್ತಿ ಪಡೆಯುವ ರೇಸ್​ನಲ್ಲಿವೆ ಎಂದು ಸಾಭಿತು ಪಡಿಸಿದೆ.
ಈ ಮಾಹಿತಿಯನ್ನು ಸ್ವತಃ ಖಾನೋಲ್ಕರ್ ದೃಢಪಡಿಸಿದ್ದು, ಇದು ಮರಾಠಿ ಭಾಷೆಯ ಸಿನಿಮಾ ರಂಗದ ಅಪರೂಪದ ಮತ್ತು ಮಹತ್ವದ ಸಾಧನೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಆಸ್ಕರ್ ಸ್ಪರ್ಧೆಯ ಪಟ್ಟಿಯನ್ನು ಪ್ರಪಂಚದಾದ್ಯಂತ ಸಲ್ಲಿಕೆಯಾದ 2,000 ಕ್ಕೂ ಹೆಚ್ಚು ಚಲನಚಿತ್ರಗಳಿಂದ ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ಕೇವಲ 150 ರಿಂದ 250 ಸಿನಿಮಾಗಳು ಮಾತ್ರ ನಿರ್ಣಾಯಕ ಹಂತಕ್ಕೆ ತಲುಪಿದೆ.

ಮರಾಠಿ ಸಿನಿಮಾಕ್ಕೆ ಒಂದು ಮೈಲಿಗಲ್ಲು

ನಿರ್ದೇಶಕ ಸುಬೋಧ್ ಖಾನೋಲ್ಕರ್ ಇನ್ಸ್ಟಾಗ್ರಾಮ್​ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಅಕಾಡೆಮಿಯ ಇಮೇಲ್ ದೃಢೀಕರಣದ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. "ದಶಾವತಾರ್ ಮುಖ್ಯ ಸ್ಪರ್ಧೆಯ ಮುಕ್ತ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ" ಎಂದು ಅವರು ಬರೆದಿದ್ದಾರೆ, ಈ ಚಿತ್ರವು ಆಸ್ಕರ್ ಪರಿಗಣನೆಯ ಈ ಹಂತವನ್ನು ತಲುಪಿದ ಮೊದಲ ಮರಾಠಿ ಸಿನಿಮಾವಾಗಿದೆ ಎಂದು ಅವರು ಬರೆದಿದ್ದಾರೆ.
ದಶಾವತಾರ್ ಬಗ್ಗೆ
ಸುಬೋಧ್ ಖಾನೋಲ್ಕರ್ ಬರೆದು ನಿರ್ದೇಶಿಸಿದ ದಶಾವತಾರ್, ದಿಲೀಪ್ ಪ್ರಭಾವಲ್ಕರ್, ಮಹೇಶ್ ಮಂಜ್ರೇಕರ್, ಭರತ್ ಜಾಧವ್, ಸಿದ್ಧಾರ್ಥ್ ಮೆನನ್, ಪ್ರಿಯದರ್ಶಿನಿ ಇಂಡಲ್ಕರ್, ವಿಜಯ್ ಕೆಂಕರೆ, ರವಿ ಕೇಲ್, ಅಭಿನಯ್ ಬೆರ್ಡೆ, ಸುನಿಲ್ ತವಾಡೆ, ಆರತಿ ವಡಗ್ಬಾಲ್ಕರ್ ಮತ್ತು ಲೋಕೇಶ್ ಮಿತ್ತಲ್ ಒಳಗೊಂಡ ತಂಡವನ್ನು ಹೊಂದಿದೆ.
ಈ ಚಿತ್ರವು ಕೊಂಕಣ ಪ್ರದೇಶದ ವಯಸ್ಸಾದ ಜಾನಪದ ಕಲಾವಿದ ಬಾಬುಲಿ ಮೇಸ್ತ್ರಿ ಅವರ ಮೇಲೆ ಕೇಂದ್ರೀಕೃತವಾಗಿದೆ, ಅವರು ವಿಷ್ಣುವಿನ ಹತ್ತು ಅವತಾರಗಳನ್ನು ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ದೃಷ್ಟಿ ಕ್ಷೀಣಿಸುತ್ತಿದ್ದಂತೆ ಮತ್ತು ಅವರ ಮಗ ಮಾಧವ್ ಆಧುನಿಕ, ನಗರ ಜೀವನಕ್ಕಾಗಿ ಹಂಬಲಿಸುತ್ತಿದ್ದಂತೆ, ಬಾಬುಲಿ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಅಡ್ಡದಾರಿಯಲ್ಲಿ ಸಿಲುಕಬೇಕಾಯಿತು. ಜೀ ಸ್ಟುಡಿಯೋಸ್ ಮತ್ತು ಓಷನ್ ಫಿಲ್ಮ್ ಕಂಪನಿ ಮತ್ತು ಓಷನ್ ಆರ್ಟ್ ಹೌಸ್ ಪ್ರೊಡಕ್ಷನ್ ಬೆಂಬಲದೊಂದಿಗೆ, ದಶಾವತಾರ್ ಸೆಪ್ಟೆಂಬರ್ 12, 2025 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಆಸ್ಕರ್ 2026 ರಲ್ಲಿ ಭಾರತದ ಪ್ರಾತಿನಿಧ್ಯ

ಮರಾಠಿಯ ದಶಾವತಾರದ ಜತೆಗೆ ಇಶಾನ್ ಖಟ್ಟರ್, ಜಾನ್ವಿ ಕಪೂರ್ ಮತ್ತು ವಿಶಾಲ್ ಜೇತ್ವಾ ನಟಿಸಿರುವ ನೀರಜ್ ಘಯ್ವಾನ್ ಅವರ ಹೋಮ್‌ಬೌಂಡ್ 98 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆ ಮಾಡಲಾಗಿದೆ.
ಎಲ್ಲಾ ವಿಭಾಗಗಳಲ್ಲಿ ಅಂತಿಮ ಆಸ್ಕರ್ ನಾಮನಿರ್ದೇಶನಗಳನ್ನು ಜನವರಿ 12 ರಿಂದ ಜನವರಿ 16, 2026 ರವರೆಗೆ ಲಾಕ್ ಮಾಡಲಾಗುತ್ತದೆ, ಅಧಿಕೃತ ಘೋಷಣೆ ಜನವರಿ 22, 2026 ಕ್ಕೆ ನಿಗದಿಯಾಗಿದೆ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 15, 2026 ರಂದು ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net