ಇವರೇ ನೋಡಿ ಮಮಿತಾ ಬೈಜು ಸ್ಟಾರ್​ಡಮ್​ ಹಿಂದಿರುವ ಅಸಲಿ ಶಕ್ತಿ: ಹೆಸರೇಳಿ ಭಾವುಕರಾದ ಸ್ಟಾರ್​ ನಟಿ! Mamita Baiju

ಮಲಯಾಳಂ ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿ ತಮ್ಮ ಅಭಿನಯದ ಮೂಲಕವೇ ಬಹು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ಈ ಸ್ಟಾರ್​ ನಟಿಯ ಯಶಸ್ಸಿನ ಹಿಂದಿರುವ ಆ ಮಹಾನ್ ವ್ಯಕ್ತಿ ಯಾರೆಂಬುದರ ಸಂಪೂರ್ಣ ವಿವರ ಇಲ್ಲಿದೆ.
Mamita Baiju
ನಟಿ ಮಮಿತಾ ಬೈಜು
Published on: 

ತಿರುವನಂತಪುರಂ: ನಟಿ ಮಮಿತಾ ಬೈಜು ಬಗ್ಗೆ ಇಂದಿನ ಜೆನ್​ ಜೀಗಳಿಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೆಚ್ಚು ಚರ್ಚೆಯಲ್ಲಿ ನಟಿಯ ಹೆಸರೆಂದರೆ ಅದು ಮಮಿತಾ ಬೈಜು ( Mamita Baiju ). ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಕೇವಲ 25ನೇ ವಯಸ್ಸಿನಲ್ಲಿ ಸ್ಟಾರ್​ಡಮ್​ ಸಾಧಿಸಿರುವ ಮಮಿತಾ ಬೈಜು ಸದ್ಯ ಸಿನಿಪ್ರಿಯರ ಹಾಟ್​ ಫೇವರಿಟ್​ ಆಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಮಿತಾ ಇಷ್ಟು ಎತ್ತರಕ್ಕೆ ಬೆಳೆದಿರುವುದರ ಹಿಂದೆ ಓರ್ವ ನಿರ್ದೇಶಕನ ಪಾತ್ರ ಇದೆ ಅನ್ನೋದನ್ನ ನಾವು ಹೇಳುತ್ತಿಲ್ಲ ಸ್ವತಃ ಮಮಿತಾ ಅವರೇ ಹೇಳಿಕೊಂಡಿದ್ದಾರೆ.

ಯಾವಾಗಲೂ ತೆರೆಯ ಮೇಲೆ ನಗುತ್ತಾ, ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ನಾಯಕಿಯರ ಹಿಂದೆ ಅವರ ಪರಿಶ್ರಮವಷ್ಟೇ ಅಲ್ಲ, ಅವರ ಪ್ರತಿಭೆಯನ್ನು ಗುರುತಿಸಿ ಬೆನ್ನುತಟ್ಟುವ ಒಬ್ಬ ಮಾರ್ಗದರ್ಶಕರ ಕೈ ಇದ್ದೇ ಇರುತ್ತದೆ. ಮಲಯಾಳಂ ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿ ತಮ್ಮ ಅಭಿನಯದ ಮೂಲಕವೇ ಬಹು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ಈ ಸ್ಟಾರ್​ ನಟಿಯ ಯಶಸ್ಸಿನ ಹಿಂದಿರುವ ಆ ಮಹಾನ್ ವ್ಯಕ್ತಿ ಯಾರೆಂಬುದರ ಸಂಪೂರ್ಣ ವಿವರ ಇಲ್ಲಿದೆ.

Also Read
ಮನಸಾರೆ ನಕ್ಕೆ, ಭಾವುಕನಾದೆ; 'ಬೆಥ್ಲಹೇಮ್​ ಕುಟುಂಬಂ ಯೂನಿಟ್'​ಗೆ ಫುಲ್​ ರೇಟಿಂಗ್​ ಕೊಟ್ಟ ಕೇರಳಂ ಸಿಎಂ VD Satheesan
Mamita Baiju

ಮಮಿತಾ ಅವರು ನೇರವಾಗಿ ಕನ್ನಡ ಚಿತ್ರಗಳಲ್ಲಿ ನಟಿಸದಿದ್ದರೂ, ಡಬ್ ಮಾಡಿದ ಚಿತ್ರಗಳ ಮೂಲಕವೇ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಹೆಗ್ಗಳಿಕೆ ಅವರದ್ದು. ತೀರಾ ಕಿರಿಯ ವಯಸ್ಸಿನಲ್ಲೇ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಆಕೆ, ಕೇವಲ ನಾಲ್ಕು ಸಿನಿಮಾಗಳ ಮೂಲಕ ಒಟ್ಟು ಸಾವಿರ ಕೋಟಿ ರೂ. ಕ್ಲಬ್‌ಗೆ ಕಾಲಿಟ್ಟು ಅಪರೂಪದ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಬೆಥ್ಲೆಹೇಮ್​ ಕುಟುಂಬಂ ಯೂನಿಟ್​ ಸಿನಿಮಾ ಮಲಯಾಳಂ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 300 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಕಂಡು ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ. ಈ ಮೂಲಕ ಆಕೆಯ ಸ್ಟಾರ್‌ಡಮ್ ಮತ್ತಷ್ಟು ಎತ್ತರಕ್ಕೇರಿದೆ.

ಇತ್ತೀಚೆಗೆ ನಡೆದ ಬೆಥ್ಲೆಹೇಮ್​ ಕುಟುಂಬಂ ಯೂನಿಟ್​ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಮಿತಾ ಬೈಜು ಭಾವುಕರಾಗಿ ಮಾತನಾಡುತ್ತಾ ತಮ್ಮ ಯಶಸ್ಸಿನ ಶ್ರೇಯಸ್ಸನ್ನು ನಿರ್ದೇಶಕ ಗಿರೀಶ್​ ಎ.ಡಿ. ಅವರಿಗೆ ಸಲ್ಲಿಸಿದ್ದಾರೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಪ್ರಮುಖ ಪಾತ್ರಗಳನ್ನು ನಿರ್ವಹಿಸಬಲ್ಲೆನೆ ಎಂಬ ಸಂದೇಹವಿತ್ತು. ಆದರೆ, ನನಗಿಂತ ನನ್ನ ಮೇಲೆ ಹೆಚ್ಚು ನಂಬಿಕೆ ಇಟ್ಟವರು ನಿರ್ದೇಶಕ ಗಿರೀಶ್ ಎ.ಡಿ. ಎಂದು ಸ್ಮರಿಸಿಕೊಂಡಿದ್ದಾರೆ.

ಒಮ್ಮೆಯೂ ಸಿನಿಮಾದ ಹಿನ್ನೆಲೆ ಇಲ್ಲದ, ಏನೂ ತಿಳಿಯದ ಒಂಟಿ ಹುಡುಗಿಯ ಹಿಂದೆ ನಿಂತು ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಸಮಾಜದಲ್ಲಿ ಎಂತಹ ಗೌರವ ಸಿಗುತ್ತದೆ ಎಂಬುದನ್ನು ನಾನಿಂದ ಅನುಭವಿಸುತ್ತಿದ್ದೇನೆ ಎಂದು ಮಮಿತಾ ಭಾವುಕರಾಗಿ ಹೇಳಿಕೊಂಡಿದ್ದಾರೆ.

ನಿರ್ದೇಶಕ ಗಿರೀಶ್ ಅವರು ತಮ್ಮ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿ ಚಿತ್ರರಂಗಕ್ಕೆ ಪರಿಚಯಿಸಿದರು. ಬ್ಲಾಕ್‌ಬಸ್ಟರ್ 'ಪ್ರೇಮುಲು' ಚಿತ್ರದಿಂದ ಹಿಡಿದು ಇಂದಿನ ಬೆಥ್ಲೆಹೇಮ್​ ಕುಟುಂಬಂ ಯೂನಿಟ್​ವರೆಗೆ ತಮಗೆ ದೊಡ್ಡ ಅವಕಾಶಗಳನ್ನು ನೀಡಿ ಬೆಂಬಲಿಸಿದ ಗಿರೀಶ್ ಅವರಿಗೆ ಜೀವಮಾನವಿಡೀ ಋಣಿಯಾಗಿರುವುದಾಗಿ ಮಮಿತಾ ಭಾವುಕವಾಗಿ ನುಡಿದಿದ್ದಾರೆ.

Also Read
ಮಮಿತಾ ಅತಿ ಸುಂದರಿಯೇನಲ್ಲ ಆದ್ರೆ ನೋಡಲು ಆಕರ್ಷಕವಾಗಿದ್ದಾರೆ: ಆಕೆಗೆ ಸಿಕ್ಕ ಈ ಅದೃಷ್ಟ ಯಾರಿಗೂ ಸಿಗಲಿಲ್ಲವಂತೆ! Mamitha Baiju
Mamita Baiju

ಒಟ್ಟಾರೆಯಾಗಿ, ಮಮಿತಾ ಬೈಜು ಅವರ ಈ ಯಶಸ್ಸಿನ ಪಯಣ ಕೇವಲ ಆಕೆಯ ಕಠಿಣ ಪರಿಶ್ರಮವಷ್ಟೇ ಅಲ್ಲ, ಬದಲಿಗೆ ಪ್ರತಿಭೆಯನ್ನು ಗುರುತಿಸುವ ನಿರ್ದೇಶಕರ ದೃಷ್ಟಿಕೋನದ ಫಲವಾಗಿದೆ. ಸರಿಯಾದ ಸಮಯದಲ್ಲಿ ಸಿಕ್ಕ ಅವಕಾಶಗಳು ಮತ್ತು ದೃಢವಾದ ಬೆಂಬಲವಿದ್ದರೆ ಎಂತಹ ಸಾಮಾನ್ಯ ನಟಿಯಾದರೂ ಚಿತ್ರರಂಗದ ದಿಗ್ಗಜರ ಸಾಲಿಗೆ ಏರಬಹುದು ಎಂಬುದನ್ನು ಮಮಿತಾ ಸಾಬೀತುಪಡಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಈ ನಟಿಯಿಂದ ಇನ್ನೂ ಅನೇಕ ಅದ್ಭುತ ಚಿತ್ರಗಳನ್ನು ನಿರೀಕ್ಷಿಸಬಹುದಾಗಿದ್ದು, ಆಕೆಯ ಸ್ಟಾರ್‌ಡಮ್ ಮತ್ತಷ್ಟು ಎತ್ತರಕ್ಕೇರಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net