ಮನಸಾರೆ ನಕ್ಕೆ, ಭಾವುಕನಾದೆ; 'ಬೆಥ್ಲಹೇಮ್​ ಕುಟುಂಬಂ ಯೂನಿಟ್'​ಗೆ ಫುಲ್​ ರೇಟಿಂಗ್​ ಕೊಟ್ಟ ಕೇರಳಂ ಸಿಎಂ VD Satheesan

ಮನಸಾರೆ ನಕ್ಕೆ, ಭಾವುಕನಾದೆ; 'ಬೆಥ್ಲಹೇಮ್​ ಕುಟುಂಬಂ ಯೂನಿಟ್'​ಗೆ ಫುಲ್​ ರೇಟಿಂಗ್​ ಕೊಟ್ಟ ಕೇರಳಂ ಸಿಎಂ VD Satheesan
Published on: 
  • ಬೆಥ್ಲಹೇಮ್​ ಕುಟುಂಬಂ ಯೂನಿಟ್ ಬಾಲ್ಯದ ದಿನಗಳನ್ನು ನೆನಪಿಸಿತು.

  • ಬೇಗ ಸಿನಿಮಾ ನೋಡದಿದ್ದಕ್ಕೆ ನನ್ನ ಮೇಲೆ ನನಗೆ ಬೇಸರವಿದೆ ಎಂದು ಪೋಸ್ಟ್ ಹಂಚಿಕೊಂಡ ಕೇರಳಂ ಸಿಎಂ ವಿಡಿ ಸತೀಶನ್​

  • ಬೆಥ್ಲಹೇಮ್​ ಕುಟುಂಬಂ ಯೂನಿಟ್ ಸಿನಿಮಾಕ್ಕೆ ಫುಲ್​ ಮಾರ್ಕ್ಸ್​ ಕೊಟ್ಟ ಕೇರಳಂ ಸಿಎಂ

 Bethlehem Kudumba Unit: ಮಲಯಾಳಂ ನಟಿ ಮಮಿತಾ ಬೈಜು ಮತ್ತು ನಟ ನಿವಿನ್​ ಪೌಲಿ ಮುಖ್ಯ ಭೂಮಿಕೆಯ ಬೆಥ್ಲಹೇಮ್​ ಕುಟುಂಬಂ ಯೂನಿಟ್ ಸಿನಿಮಾವು ಒಟಿಟಿಯಲ್ಲಿ ತೆರೆ ಕಂಡು ಸಾಕಷ್ಟು ದಿನಗಳು ಕಳೆದಿದ್ದರೂ ಸಹ ಅದಕ್ಕಿರುವ ಹೈಪ್​ ಮಾತ್ರ ಕಡಿಮೆಯಾಗಿಲ್ಲ. ಪಾತ್ರಧಾರಿಗಳ ನೈಜ ನಟನೆ, ಕಥಾ ಹಂದರ, ಬದುಕಿನ ವಾಸ್ತವತೆ, ಪೋಷಕರ ಒತ್ತಾಯ, ಏಜ್​ ಗ್ಯಾಪ್​ ಪ್ರೇಮ ಪ್ರಸಂಗವನ್ನು ಹೇಳುವ ಈ ಸಿನಿಮಾಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಸದ್ಯ ಕೇರಳಂ ಸಿಎಂ ವಿಡಿ ಸತೀಶನ್​ ಸಹ ಫುಲ್​ ರೇಟಿಂಗ್​ ಕೊಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಬರೆದು ಉದ್ದ ಪೋಸ್ಟ್​ ಹಂಚಿಕೊಂಡಿದ್ದಾರೆ.

ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾದ ಬೆಥ್ಲಹೇಮ್​ ಕುಟುಂಬಂ ಯೂನಿಟ್ ಸಿನಿಮಾ ವಿಶ್ವಾದ್ಯಂತ 325 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಕೇರಳ ಸಿಎಂ ವಿಡಿ ಸತೀಶನ್​ ಅವರು ತಮ್ಮ ಬಿಜಿ ಶೆಡ್ಯೂಲ್​ ಮಧ್ಯೆಯೂ ಇಂತಹ ಸಿನಿಮಾವನ್ನು ನೋಡಿ, ಎಕ್ಸ್​ನಲ್ಲಿ ಉದ್ದುದ್ದ ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲ್ಯದ ದಿನ ನೆನಪಾಯ್ತು

ತಿಂಗಳಿಗೆ ಒಂದು ಸಿನಿಮಾವನ್ನು ನೋಡುವ ಅಭ್ಯಾಸ ನನ್ನದು. ಆದರೆ, ಹೆಚ್ಚು ಕೆಲಸಗಳಿದ್ದರಿಂದ ಆ ರೂಢಿ ತಪ್ಪಿ ಹೋಗಿತ್ತು. ಒಂದು ಸಣ್ಣ ವಿರಾಮದ ನಂತರ ನಿನ್ನೆ ರಾತ್ರಿ ನಾನು ಮತ್ತು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯೊಂದಿಗೆ ಬೆಥ್ಲಹೇಮ್​ ಕುಟುಂಬಂ ಯೂನಿಟ್ ಸಿನಿಮಾ ನೋಡಿದೆ.

ಬೆಥ್ಲಹೇಮ್​ ಕುಟುಂಬಂ ಯೂನಿಟ್​ನ ನಿರೂಪಣ ಶೈಲಿ ಬಹಳ ಭಿನ್ನವಾಗಿದೆ. ಎಲ್ಲಿಯೂ ಬೇಸವನ್ನುಂಟು ಮಾಡೋದಿಲ್ಲ. ನಿವಿನ್ ಪೌಲಿ ಮತ್ತು ಮಮಿತಾ ಬೈಜು ಅಭಿನಯದ ಈ ಚಿತ್ರವು ಗ್ರಾಮೀಣ ಜೀವನ, ದೈನಂದಿನ ಸಂಬಂಧಗಳು ಮತ್ತು ಪ್ರಣಯದ ಉಷ್ಣತೆಯ ಚಿತ್ರಣದೊಂದಿಗೆ ತನ್ನ ಬಾಲ್ಯದ ದಿನಗಳನ್ನು ನೆನಪಿಸಿತು. ಹಳ್ಳಿಯ ವಾತಾವರಣ, ಜನರು ಸಾಮಾನ್ಯ ಜೀವನ, ಅವರ ನಡುವಿನ ಪ್ರೀತಿ, ಹಿತವಾದ ನಂಟು. ಹೀಗೆ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ನೋಡಲು ಇಷ್ಟು ತಡವೇಕೆ ಮಾಡಿದೆ?" ಎಂದು ಅನಿಸಿತು ಎಂದು ತಮ್ಮ ಮೇಲೆ ಬೇಸರ ವ್ಯಕ್ತಪಡಿಸಿಕೊಂಡರು.

ಬಾಲ್ಯದ ದಿನಗಳನ್ನು ನೆನಪಿಸಿತು

ನಾಯಕ ಮತ್ತು ನಾಯಕಿ ಪಾತ್ರವಲ್ಲಿ ಒಂದೆರಡು ದೃಶ್ಯದಲ್ಲಿ ಬಂದು ಹೋಗುವ ಅತಿಥಿ ಪಾತ್ರಗಳು ಸಹ ತಮ್ಮ ಉಪಸ್ಥಿತಿಯನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ. ಇಡೀ ಸಿನಿಮಾ ನಮ್ಮನ್ನು ನಗುವಂತೆ ಮಾಡಿತು, ಭಾವುಕರನ್ನಾಗಿಸಿತು ಒಟ್ಟಾರೆಯಾಗಿ ಆರಂಭದಿಂದ ಕೊನೆಯವರೆಗೆ ತುಂಬಾ ಆನಂದಿಸಿದೆವು. ಇದು ಒಂದು ಪರಿಪೂರ್ಣ ಟೀಮ್ ವರ್ಕ್ ಇರುವ ಸಿನಿಮಾ. ಸಿನಿಮಾ ನೋಡಿದ ತಕ್ಷಣ ಅದರ ಬಗ್ಗೆ ಬರೆದುಕೊಳ್ಳೋದು ನನ್ನ ಅಭ್ಯಾಸವಲ್ಲ ಆದರೆ ಇದು ನಿಜಕ್ಕೂ ನನಗೆ ಹೆಚ್ಚೇ ಕನೆಕ್ಟ್​ ಆಯಿತು. ಬರೆಯದೇ ಸುಮ್ಮನಿದ್ದರೆ ಸರಿಯಲ್ಲ. ಮನಸ್ಸಿಗೆ ಬಹಳ ರಿಫ್ರೆಶ್‌ಮೆಂಟ್ ಸಿಕ್ಕಿದ್ದರಿಂದ ಬರೆಯಲೇ ಬೇಕೆನಿಸಿತು ಎಂದಿದ್ದಾರೆ.

ಪಾಪ ಗ್ಲಿಕ್ಸನ್

ನಿರ್ದೇಶಕ ಎ.ಡಿ. ಗಿರೀಶ್ ಮತ್ತು ನಟ ಸಂಗೀತ್ ಪ್ರತಾಪ್ ಅವರಿಗೆ ಫೋನ್ ಮಾಡಿ ನನ್ನ ಅಭಿನಂದನೆಗಳನ್ನು ತಿಳಿಸಿದೆ. ನಿವಿನ್ ಪಾಲಿ ಮತ್ತು ಮಮಿತಾ ಬೈಜು ಅವರ ಸಿಕ್ಕಿಲ್ಲ. ಇವರೊಂದಿಗೆ ನನ್ನ ಮನಸ್ಸಿನಲ್ಲಿ ಉಳಿದ ಮತ್ತೊಂದು ಪಾತ್ರವೆಂದರೆ 'ಗ್ಲಿಕ್ಸನ್'. ಪಾಪ ಗ್ಲಿಕ್ಸನ್. ಈ ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ವಿಮರ್ಶೆ ಬರೆದುಕೊಂಡಿದ್ದಾರೆ ಕೇರಳಂ ಸಿಎಂ ವಿಡಿ ಸತೀಶನ್​.

ಥ್ಯಾಂಕ್ಸ್ ಎಂದ ಸಿನಿಮಾ ತಂಡ

ನಿವಿನ್​ ಪೌಲಿ, ಸಣಗೀತ್​ ಪ್ರತಾಪ್​, ಸುರೇಶ್​ ಕೃಷ್ಣ, ರೋಷನ್​ ಶನ್ವಾಸ್​, ಗಿರೀಶ್​ ಸಿಎಂ ಪೋಸ್ಟ್​ ಥ್ಯಾಂಕ್ಯು ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಮಮಿತಾ ಬೈಜು ಹೆಸರನ್ನು ಟ್ಯಾಗ್​ ಮಾಡಿ ನಿಮಗೆ ಈ ಪೋಸ್ಟ್ ಕಂಡಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಈ ಸಿಎಂ ಇಸ್​ ಡಿಫರೆಂಟ್ ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net