ಹಾರರ್​ ಫ್ಯಾಂಟಸಿಗೆ ಆ್ಯಕ್ಷನ್​-ಕಟ್​ ಹೇಳಲು ರೆಡಿಯಾದ ಮಲ್ಲಿಕಾಪುರಂ ನಿರ್ದೇಶಕ ವಿಷ್ಣು ಶಶಿಶಂಕರ್​

ascascsac
Published on

ಹಿಟ್​ ಮಲ್ಲಿಕಾಪುರಂ ಚಿತ್ರ ನಿರ್ದೇಶಿಸಿದ್ದ ವಿಷ್ಣು ಶಶಿ ಶಂಕರ್ ಹೊಚ್ಚ ಹೊಸ ಪ್ರಾಜೆಕ್ಟ್​ನೊಂದಿಗೆ ವಾಪಸ್ಸಾಗಿದ್ದಾರೆ. ಇದೊಂದು ಹಾರರ್-ಫ್ಯಾಂಟಸಿ ಜಾನರ್​ ಚಿತ್ರವಾಗಿದ್ದು ಸುಮತಿ ವಲವು ಎಂದು ಟೈಟಲ್​ ಇಡಲಾಗಿದೆ. ಅರ್ಜುನ್ ಅಶೋಕನ್ ಮತ್ತು ಮಾಳವಿಕಾ ಮನೋಜ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದು, ಅಭಿಲಾಷ್ ಪಿಳ್ಳೈ ಚಿತ್ರಕಥೆ ಬರೆದಿರುವ ಈ ಸಿನಿಮಾ ನವೆಂಬರ್‌ 30ರಿಂದ ಶೂಟಿಂಗ್‌ ಆರಂಭಿಸಿದೆ. ಹಾರರ್​ ಫ್ಯಾಂಟಸಿ ಜತೆ ಕಾಮಿಡಿ ಅಂಶಗಳೂ ಚಿತ್ರದಲ್ಲಿರಲಿವೆ.

ಅರ್ಜುನ್ ಅಶೋಕನ್, ಮಾಳವಿಕಾ ಮನೋಜ್​ ಜತೆ ಬಾಲು ವರ್ಗೀಸ್, ಗೋಕುಲ್ ಸುರೇಶ್, ಸೈಜು ಕುರುಪ್, ಸಿದ್ಧಾರ್ಥ್ ಬರತನ್, ಶ್ರೀಪಥ್ ಯಾನ್, ದೇವಾನಂದ, ಶ್ರವಣ್ ಮುಖೇಶ್, ಗೋಪಿಕಾ ಮುಖೇಶ್, ಅನಿಲ್, ಶಿವದಾ, ಸಿಜಾ ರೋಸ್, ಜಸ್ನ್ಯಾ, ಜಯದೀಶ್ ಚಿತ್ರದ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಶಂಕರ್ ಪಿ.ವಿ ಅವರ ಛಾಯಾಗ್ರಹಣ, ರಂಜಿನ್ ರಾಜ್ ಸಂಗೀತ, ಶಫೀಕ್ ಮೊಹಮ್ಮದ್ ಅಲಿ ಸಂಕಲನ ಚಿತ್ರಕ್ಕಿದೆ. ಅಜಯ್ ಮಂಗಡ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net