ಟಾಪ್​ ಮಾತ್ರ ಧರಿಸಿದ ಮಲ್ಲಿಕಾ ಬೋಲ್ಡ್ ಫೋಟೋ ವೈರಲ್!

Published on
ಬಾಲಿವುಡ್​ನ ಹಾಟ್ ನಟಿ ಮಲ್ಲಿಕಾ ಶೆರಾವತ್ ಅವರು 2000ರಲ್ಲಿ ತೆರೆಯ ಮೇಲೆ ಸಾಕಷ್ಟು ಮಿಂಚಿದ್ದರು. ತಮ್ಮ ಬೋಲ್ಡ್​ ಪಾತ್ರಗಳು, ಬೋಲ್ಡ್ ಉಡುಪುಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರ ಕಿಸ್ಸಿಂಗ್​ ಸೀನ್, ಅರೆ ನಗ್ನ ದೃಶ್ಯ​ಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿದ್ದನ್ನು ತೆರೆ ಮೇಲೆ ನೋಡಲು ಥಿಯೇಟರ್​ಗಳಿಗೆ ಕೇವಲ ಗಂಡಸರ ಮಹಾಸಾಗರವೇ ಹರಿದುಬರುತ್ತಿತ್ತಂತೆ. ಆದರೆ, ಒಂದು ಹಂತದ ನಂತರ ನಟಿ ಮಲ್ಲಿಕಾ ಅವರು ನಟನೆಯಿಂದ ದೂರ ಉಳಿದರು.
ಆದರೆ, ನಟಿ ಮಲ್ಲಿಕಾ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ. ಇನ್ನು, ನಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 2 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗಾಗಿ, ಯಾವಗಲೂ ಹೊಸ ಹೊಸ ಪೋಸ್ಟ್​ಗಳನ್ನು ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ. ಹಾಗೆಯೇ, ಸದ್ಯ ನಟಿ ಮಲ್ಲಿಕಾ ಹೊಸ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದರಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದ್ದಾರೆ.
ಇಂದು ಹೊಸ ಫೋಟೋ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ನಟಿ ಕಪ್ ಹಿಡಿದು ಕೂತಿದ್ದಾರೆ. ಇನ್ನು, ಈ ಫೋಟೋದಲ್ಲಿ ಅವರು ಟಾಪ್​ ಮಾತ್ರ ಧರಿಸಿದ್ದಾರೆ. ಈ ಫೋಟೋ ನೋಡಿದ ಪಡ್ಡೆ ಹುಡುಗರು ಫುಲ್ ಖುಷ್ ಆಗಿದ್ದಾರೆ. ಜತೆಗೆ, ಅಭಿಮಾನಿಗಳು ನಟಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಬರೀ ಟಾಪ್ ಧರಿಸದ ಕಾರಣ ನಟಿ 45ನೇ ವರ್ಷದಲ್ಲಿ ಕೂಡಾ ಸೂಪರ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ನಟಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net