ಸಲಗಕ್ಕೆ ದನಿಯಾದ ಮಲೇಷ್ಯಾದ ರ‍್ಯಾಪರ್

Salage
Published on

ಬೆಂಗಳೂರು: ಕಳೆದ ವರ್ಷದ ಟಾಪ್ ಸಾಂಗ್​ಗಳಲ್ಲಿ ಒಂದಾದ ‘ಟಗರು ಬಂತು ಟಗರು’ ಹಾಡಿಗಾಗಿ ತಮಿಳಿನ ನಾಟಿ ಸ್ಟೈಲ್ ಸಿಂಗರ್ ಅಂಥೋನಿ ದಾಸ್ ಅವರನ್ನು ಕರೆಸಿದ್ದ ಸಂಗೀತ ನಿರ್ದೇಶಕ ಚರಣ್​ರಾಜ್, ಈ ಬಾರಿಯೂ ಅಂಥದ್ದೇ ಮ್ಯಾಜಿಕ್ ಮಾಡಲು ಮಲೇಷ್ಯಾದಲ್ಲಿರುವ ತಮಿಳು ರ್ಯಾಪರ್ ಯೋಗಿ ಬಿ. ಅವರಿಂದ ‘ಸಲಗ’ ಸಿನಿಮಾದ ಟೈಟಲ್ ಟ್ರಾ್ಯಕ್ ಹಾಡಿಸಿದ್ದಾರೆ.

ರಜನಿಕಾಂತ್ ಅಭಿನಯದಲ್ಲಿ ಇತ್ತೀಚೆಗೆ ಬಿಡುಗಡೆ ಆಗಿದ್ದ ‘ದರ್ಬಾರ್’ ‘ಕಾಲ’, ಧನುಷ್ ಅವರ ‘ಪಟಾಸ್’ ಸಿನಿಮಾ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ರ್ಯಾಪ್ ಸಾಂಗ್ಸ್ ಹಾಡಿ ಯೋಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಜತೆಗೆ ಮಲೇಷ್ಯಾದಲ್ಲಿ ಅವರು ಹಿಪ್​ಹಾಪ್ ಹಾಡುಗಾರರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ‘ಸಲಗ’ದ ಟೈಟಲ್ ಟ್ರಾ್ಯಕ್ ಹಾಡಲು ಕನ್ನಡಕ್ಕೂ ಬಂದಿದ್ದಾರೆ.

‘ಸಲಗ ಸಿನಿಮಾದ ಟೈಟಲ್ ಟ್ರಾ್ಯಕ್ ಹಾಡಲು ಬೇರೆ ರೀತಿಯ ವಾಯ್್ಸ ಬೇಕಿತ್ತು. ಯೋಗಿ ಅವರ ಹಾಡುಗಳನ್ನು ಕೇಳಿದ್ದೆ, ಅವರು ಸೂಟ್ ಆಗುತ್ತಾರೆ ಎಂದು ಅವರನ್ನು ಕರೆಸಿದ್ದೇವೆ. ಈ ಚಿತ್ರದಲ್ಲಿ ಅವರ ಜತೆ ಸಂಚಿತ್ ಹೆಗ್ಡೆ ಸಹ ಹಾಡಿದ್ದಾರೆ. ಯೋಗಿ ಅವರು ಮೂರು ದಿನ ನಮ್ಮೊಂದಿಗೆ ಇದ್ದು, ಹಾಡನ್ನು ಕಲಿತು ಹಾಡಿದ್ದಾರೆ. ನಾವು ಕೂಡ ಉಚ್ಚಾರಣೆ ತಪ್ಪಾಗಬಾರದು ಎಂದು ಬಹಳ ಎಚ್ಚರ ವಹಿಸಿದ್ದೇವೆ. ‘ಟಗರು ಬಂತು ಟಗರು’ ರೀತಿ ಈ ಹಾಡು ಕೂಡ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಚರಣ್ ರಾಜ್.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ‘ಹ್ಯಾಂಡ್ಸಪ್’ ಹಾಡನ್ನು ಬರೆದಿದ್ದ ನಾಗಾರ್ಜುನ ಶರ್ಮಾ ಟೈಟಲ್ ಟ್ರಾ್ಯಕ್ ಬರೆದಿದ್ದಾರೆ. ಈ ಹಾಡಿಗಾಗಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಜತೆಗೆ ಸ್ಮಶಾನದಲ್ಲಿಯೂ ನಿರ್ದೇಶಕ ವಿಜಿ ಶೂಟಿಂಗ್ ಮಾಡಿದ್ದಾರೆ. ಯುಗಾದಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲಾಗುವುದು ಎನ್ನುತ್ತಾರೆ ನಿರ್ವಪಕ ಕೆ.ಪಿ.ಶ್ರೀಕಾಂತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net