ದಿಶಾ-ಆದಿತ್ಯ ಕಿಸ್​ ಪೋಸ್ಟರ್​ ಕಂಡು ಹುಬ್ಬೇರಿಸಿದ ನೆಟ್ಟಿಗರು: ಮೀಮ್ಸ್​ ಮೂಲಕ ಚುಂಬನದ ವರ್ಣನೆ ಹೀಗಿದೆ...

Disha 5 jan 20
Published on

ಮುಂಬೈ: ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲು ಒಂದು ತಿಂಗಳು ಬಾಕಿ ಇರುವಾಗಲೇ ಬಾಲಿವುಡ್​ನ ಹಾಟ್​ ಆ್ಯಂಡ್​ ಬೋಲ್ಡ್​ ಬೆಡಗಿ ದಿಶಾ ಪಾಟನಿ ಮತ್ತು ಆದಿತ್ಯ ರಾಯ್​ ಕಪೂರ್​ ನಟನೆಯ 'ಮಲಾಂಗ್​' ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಸೃಷ್ಟಿಸಿದೆ.

ಅನಿಲ್​ ಕಪೂರ್​ ಮತ್ತು ಕುನಾಲ್​ ಖೇಮೂ ಪ್ರಮುಖ ತಾರಾಗಣ ಇರುವ ಈ ರೊಮ್ಯಾಂಟಿಕ್​ ಮಲಂಗ್​ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದ್ದು, ಇದಕ್ಕಾಗಿ ಚಿತ್ರತಂಡ ಚಿತ್ರದ ರಗಡ್​ ಪೋಸ್ಟರ್​ಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿರಸಿಕರನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದೆ. ದಿಶಾ ಅವರ ಮಾದಕ ನೋಟ, ಆದಿತ್ಯರ ಶರ್ಟ್​ಲೆಸ್​ ಲುಕ್​, ಗನ್​ ಹಿಡಿದುಕೊಂಡು ನಗುತ್ತಿರುವ ಅನಿಲ್​ ಕಪೂರ್​ ಮತ್ತು ಕುನಾಲ್​ ಕೆಮ್ಮು ಅವರ ತೀಕ್ಷ್ಣ ನೋಟದ ಪೋಸ್ಟರ್​ಗಳನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.

ಇದೀಗ ಹೊಸ ಪೋಸ್ಟರ್​ ಶೇರ್​ ಮಾಡಿರುವ ಚಿತ್ರತಂಡ ಸಿನಿರಸಿಕರಲ್ಲಿ ಕಿಚ್ಚು ಹೆಚ್ಚಿಸಿದೆ. ನಟ ಆದಿತ್ಯ ಭುಜದ ಮೇಲೆ ಕುಳಿತಿರುವ ದಿಶಾ, ಕೆಳಗೆ ಬಾಗಿ ಆದಿತ್ಯ ತುಟಿಗೆ ಚುಂಬಿಸುತ್ತಿರುವ ವಿಭಿನ್ನ ದೃಶ್ಯ ಪೋಸ್ಟರ್​ನಲ್ಲಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಷ್ಟೇ ಅಲ್ಲದೆ, ನೆಟ್ಟಿಗರು ಮೀಮ್ಸ್​ಗಳ ಮೂಲಕ ಹೊಸ ಪೋಸ್ಟರ್​ ಕುರಿತು ತಮ್ಮದೇ ರೀತಿಯಲ್ಲಿ ವ್ಯಂಗ್ಯವಾಡುತ್ತಿದ್ದು, ಅವುಗಳ ಝಲಕ್​ ಈ ಕೆಳಗೆ ಕಾಣಬಹುದಾಗಿದೆ.

ಇನ್ನು ಚಿತ್ರದ ಟ್ರೈಲರ್​ ಸೋಮವಾರ ಬಿಡುಗಡೆಯಾಗಲಿದ್ದು, ಫಬ್ರವರಿ 7ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ. ಚಿತ್ರವನ್ನು ಟಿ-ಸೀರೀಸ್​, ಎಲ್​ಯುವಿ ರಂಜನ್​, ಅಂಕುರ್​ ಗಾರ್ಗ್​ ಮತ್ತು ಜಯ್​ ಶೇವಕ್ರಮಣಿ ನಿರ್ಮಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net