ಪ್ರಿಯಾಂಕಾ ಎದೆಗಾರಿಕೆ ತೋರಿದರೆ ತಪ್ಪೇನು- ತಾಯಿ ಮಧು ಚೋಪ್ರಾ ಪ್ರಶ್ನೆ!

priyanka
Published on

ಮುಂಬೈ: ಇತ್ತೀಚೆಗೆ ನಡೆದ 62ನೇ ಗ್ರಾಮಿಸ್​ ಅವಾರ್ಡ್ಸ್​ನಲ್ಲಿ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಸಖತ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಟ್ರೋಲ್​ಗಳ ಕಣ್ಣಿಗೆ ಗುರಿಯಾಗಿದ್ದರು. ಟ್ರೋಲ್​ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪಿಗ್ಗಿ ತಾಯಿ ತನ್ನ ಮಗಳ ಪರ ವಹಿಸಿಕೊಂಡು ಬಂದಿದ್ದಾರೆ.

"ನನ್ನ ಮಗಳು ಅವಳದ್ದೇ ಆದ ರೀತಿಯಲ್ಲಿ ಬದುಕುತ್ತಾಳೆ. ಅದರಿಂದ ಯಾರಿಗೂ ಹಾನಿ ಮಾಡುವುದಿಲ್ಲ. ಅದು ಅವಳ ದೇಹ ಮತ್ತದು ಸುಂದರವಾಗಿದೆ ಕೂಡ" ಎಂದು ಪ್ರಿಯಾಂಕ ತಾಯಿ ಮಧು ಚೋಪ್ರಾ ತಿಳಿಸಿದ್ದಾರೆ. ಅದಲ್ಲದೆ ತನ್ನ ಮಗಳು ಅವಾರ್ಡ್​ ಫಂಕ್ಷನ್​ಗೆ ಹೋಗುವ ಮೊದಲೇ ಆ ಡ್ರೆಸ್​ನ್ನು ಆಕೆಗೆ ತೋರಿಸಿರುವುದಾಗಿ ಆಕೆ ಹೇಳಿದ್ದಾರೆ. ಪ್ರಿಯಾಂಕ ಮೊದಲು ನನಗೆ ಡ್ರೆಸ್​ ತೋರಿಸಿದಾಗ ಸ್ವಲ್ಪ ಭಯವಾಗಿತ್ತು. ಆದರೆ ಅವಳು ಅದನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

ಟ್ರೋಲ್​ ಮಾಡುವವರ ಬಗ್ಗೆ ಮಾತನಾಡಿರುವ ಮಧು ಚೋಪ್ರಾ, "ಅವರೆಲ್ಲ ಅನಾಮಧೇಯ ಜನರು. ಕಂಪ್ಯೂಟರ್​ಗಳ ಹಿಂದೆ ಅಡಗಿಕೊಂಡು ಮಾತನಾಡುತ್ತಾರೆ." ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಗ್ರಾಮಿಸ್​ ಅವಾರ್ಡ್​ ಫಂಕ್ಷನ್​ ಈ ವರ್ಷ ಜನವರಿ 27ರಂದು ಕ್ಯಾಲಿಫೋರ್ನಿಯಾದ ಲ್ಯಾಸ್​ ಏಂಜಲೀಸ್​ ನಗರದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಪ್ರಿಯಾಂಕ ಚೋಪ್ರಾ ತನ್ನ ಪತಿ ನಿಕ್​ನೊಂದಿಗೆ ಕಾಣಿಸಿಕೊಂಡಿದ್ದರು. ಉದ್ದ ನೆಕ್​ ಹೊಂದಿದ್ದ ಬಿಳಿ ಬಣ್ಣದ ಗೌನ್​ ತೊಟ್ಟಿದ್ದ ಪ್ರಿಯಾಂಕಾಳ ಫೋಟೋ ವೈರಲ್​ ಆಗುವುದರೊಂದಿಗೆ ಟ್ರೋಲ್​ಗಳ ಬಾಯಿಗೆ ಸಿಕ್ಕಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net