

ಬೆಂಗಳೂರು: ನಟಿಯರನೇಕರು ಅದರಲ್ಲೂ ಬಾಲಿವುಡ್ ಬೆಡಗಿಯರು ಉಡುಪಿನ ಕಾರಣಕ್ಕೆ ಆಗಾಗ ಟ್ರೋಲ್ಗೆ ಹಾಗೂ ಸಿನಿಪ್ರಿಯರ ಅಸಮಾಧಾನಕ್ಕೆ ಒಳಗಾಗುವುದು ಹೊಸದೇನಲ್ಲ. ಇದೀಗ ಅಂಥದ್ದೇ ಒಂದು ಅಸಮಾಧಾನಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಒಳಗಾಗಿದ್ದಾರೆ. ಕಾರಣ, ಅವರು ಧರಿಸಿದ್ದ ಉಡುಪು.
ಲಾಸ್ ಏಂಜಲೀಸ್ನ ಸ್ಟೇಪಲ್ ಸೆಂಟರ್ನಲ್ಲಿ ಹಮ್ಮಿಕೊಂಡಿರುವ 62ನೇ ಗ್ರಾಮಿ ಅವಾರ್ಡ್ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಎದೆ ಕಾಣುವಂತೆ ನಿಲುವಂಗಿಯಂಥ ದಿರಿಸನ್ನು ತೊಟ್ಟು ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ, ಆ ಉಡುಗೆ ತೊಟ್ಟು ವಿವಿಧ ಭಂಗಿಯಲ್ಲಿ ಫೋಟೋಗೆ ಪೋಸ್ ಕೊಟ್ಟು ಸಂಭ್ರಮಿಸಿದ್ದಲ್ಲದೆ ಆ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.
ಈ ದಿರಿಸಿನಲ್ಲಿ ಅವರೊಂದಿಗೆ ಪತಿ ನಿಕ್ ಜೋನಾಸ್ ಕೂಡ ಇದ್ದಿದ್ದು ವಿಶೇಷ. ಪ್ರಿಯಾಂಕಾ ಹೀಗೆ ಬೋಲ್ಡ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳುವ ಎದೆಗಾರಿಕೆ ತೋರಿದ್ದಕ್ಕೆ ಕೆಲವರಷ್ಟೇ ಮೆಚ್ಚುಗೆ ಸೂಚಿಸಿದ್ದರೂ ಹಲವರು ತೀವ್ರವಾಗಿ ಟೀಕೆ ಮಾಡಿದ್ದಾರೆ. ಒಬ್ಬ ನಟಿಯಾಗಿ ಅದರಲ್ಲೂ ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕಾದವರು ಈ ರೀತಿ ಉಡುಪು ಧರಿಸುವುದು ಸಮಂಜಸವಲ್ಲ ಎಂಬುದಾಗಿ ನೆಟ್ಟಿಗರಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.