5 ಭಾಷೆಗಳಲ್ಲಿ ಮದಗಜ; ಶ್ರೀಮುರಳಿ, ಮಹೇಶ್ ಹೊಸ ಇನ್ನಿಂಗ್ಸ್​

Ullasa Madagaja
Published on

ಬೆಂಗಳೂರು: ಟೀಸರ್ ಮೂಲಕ ಸದ್ದು ಮಾಡಿದ್ದ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ‘ಮದಗಜ’ ಸಿನಿಮಾ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೊದಲು ಕನ್ನಡದಲ್ಲಷ್ಟೇ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದ ಚಿತ್ರತಂಡ ಇದೀಗ ಬಹುಭಾಷೆಯ ಮೊರೆ ಹೋಗಿದೆ. ಆ ಸಾಹಸಕ್ಕಿಳಿಯಲು ಕಾರಣವಾಗಿದ್ದು ಚಿತ್ರದ ಟೀಸರ್!

ಮಹೇಶ್

ಶ್ರೀಮುರಳಿ ಜನ್ಮದಿನದಂದು ಬಿಡುಗಡೆ ಆಗಿದ್ದ ಟೀಸರ್​ಗೆ ಭಾರಿ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ, ಪರಭಾಷೆಗಳ ನಿರ್ವಪಕರ ಕಣ್ಣ ‘ಮದಗಜ’ ಚಿತ್ರದ ಮೇಲೆ ನೆಟ್ಟಿದೆ. ಅದರಂತೆ ನಾ ಮುಂದೆ ತಾ ಮುಂದೆ ಎಂಬಂತೆ ಚಿತ್ರ ಬಿಡುಗಡೆ ಮಾಡಲು ಮುಂದೆ ಬರುತ್ತಿದ್ದಾರಂತೆ. ಅದರಂತೆ ಇದೀಗ ತೆಲುಗಿನಲ್ಲಿ ರಿಲೀಸ್ ಆಗುವುದು ಅಧಿಕೃತವಾಗಿದ್ದು, ಹೊಸವರ್ಷದ ದಿನ ತೆಲುಗು ಟೀಸರ್ ಬಿಡುಗಡೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಮಹೇಶ್ ಗೌಡ, ‘ಆರಂಭದಲ್ಲಿ ಬಹುಭಾಷೆಯ ಪ್ಲಾನ್ ಇರಲಿಲ್ಲ. ಟೀಸರ್ ಎಲ್ಲ ಭಾಷಿಕರನ್ನು ಇಂಪ್ರೆಸ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಈ ಸಿನಿಮಾ ತೆರೆಕಾಣಲಿದೆ. ಜನವರಿ ನಂತರದಲ್ಲಿ ಇನ್ನುಳಿದ ಮೂರು ಭಾಷೆಗಳ ಟೀಸರ್ ಒಂದೊಂದಾಗಿ ಹೊರಬರಲಿವೆ. ಸದ್ಯ ಜ.1ಕ್ಕೆ ಬಿಡುಗಡೆ ಆಗಲಿರುವ ತೆಲುಗು ಟೀಸರ್ ಮತ್ತು ಸಿನಿಮಾಕ್ಕೆ ಸ್ವತಃ ಶ್ರೀಮುರಳಿ ಅವರೇ ಡಬ್ ಮಾಡಲಿದ್ದಾರೆ’ ಎನ್ನುತ್ತಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಶೇ. 80 ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೇಕೆದಾಟು, ಬಾಗೇಪಲ್ಲಿ, ಮೈಸೂರಿನಲ್ಲಿ 20 ದಿನಗಳ ಶೂಟಿಂಗ್ ಮುಗಿದರೆ ಸಿನಿಮಾ ಮುಗಿದಂತೆ. ಅದಾದ ಬಳಿಕ ಏಪ್ರಿಲ್ ಕೊನೆಗೆ ಅಥವಾ ಮೇ 1ರ ಕಾರ್ವಿುಕ ದಿನಾಚರಣೆ ನಿಮಿತ್ತ ಚಿತ್ರ ಬಿಡುಗಡೆ ಮಾಡುವುದು ತಂಡದ ಯೋಜನೆ. ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net