ಬೆಂಗಳೂರು: ಕೆಲವು ಗಂಟೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಪ್ರಪಂಚ ಸಜ್ಜಾಗಿದೆ. ಹೀಗಾಗಿ, ಅನೇಕ ಮುಂಬರುವ ಸಿನಿಮಾಗಳು ತಮ್ಮ ಚಿತ್ರದ ಹೊಸ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಪ್ರಿಯರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದೇ ರೀತಿ ಅಪ್ಪು ನಟನೆಯ ‘ಲಕ್ಕಿ ಮ್ಯಾನ್’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಇದರಲ್ಲಿ ಅಪ್ಪು ಅವರ ನೋಟ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಈ ಸಿನಿಮಾದಲ್ಲಿ ನಟ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್, ನಾಗಭೂಷಣ ಮತ್ತು ಮುಂತಾದವರು ಅಭಿನಯಿಸಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಅವರು ನಿಧನರಾಗುವುದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದರು. ಅಪ್ಪು ಕೊನೆಯದಾಗಿ ನಟಿಸಿದ ಸಿನಿಮಾಗಳ ಪೈಕಿ ‘ಲಕ್ಕಿ ಮ್ಯಾನ್’, 'ಜೇಮ್ಸ್' ಚಿತ್ರಗಳು, ಸಿನಿಮಾದ ಎಲ್ಲಾ ಕೆಲಸಗಳನ್ನು ಪೂರ್ತಿ ಮಾಡಿ ಈಗ ಬಿಡುಗಡೆಗೆ ರೆಡಿಯಾಗಿವೆ.