

ಬೆಂಗಳೂರು: ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿರುವ ‘ಲಕ್ಕಿಮ್ಯಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಭುದೇವ ಜತೆ ಡ್ಯಾನ್ಸ್ ಮಾಡುತ್ತಾ, ಅಲ್ಲಲ್ಲಿ ನಗುತಾ ನಗಿಸುತ್ತಾ, ಕೊನೆಗೆ ಆಶೀರ್ವಾದಿಸುವ ಪುನೀತ್, ಈ ಟೀಸರ್ನ ಹೈಲೈಟ್. ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಲಕ್ಕಿ ಮ್ಯಾನ್’ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ನಿರ್ದೇಶಕ ನಾಗೇಂದ್ರ ಪ್ರಸಾದ್, ‘ಚಿತ್ರಕ್ಕೆ ಟೈಟಲ್ ಕೊಟ್ಟಿದ್ದೇ ಪುನೀತ್. ಭಗವಾನ್, ಭಗವಂತ, ‘ಲಕ್ಕಿಮ್ಯಾನ್’ ಅಂತ ಮೂರು ಟೈಟಲ್ ಇಟ್ಟುಕೊಂಡಿದ್ದೆವು. ಅದರಲ್ಲಿ ಅವರು ‘ಲಕ್ಕಿಮ್ಯಾನ್’ ಚೆನ್ನಾಗಿದೆ ಎಂದರು. ಅವರು ಈ ಚಿತ್ರದಲ್ಲಿ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಅವರಲ್ಲಿ ಆ ತೇಜಸ್ಸಿದೆ. ಅವರನ್ನು ನೋಡಿದಾಗೆಲ್ಲಾ ಅತ್ತಿದ್ದೇನೆ. ಕೌಟುಂಬಿಕ ಮೌಲ್ಯಗಳ ಬಗ್ಗೆ, ಹೆಣ್ಣುಮಕ್ಕಳ ಬಗ್ಗೆ ಅವರು ಹೇಳುವ ಒಂದೊಂದು ಡೈಲಾಗ್ ಕೂಡ ಎಲ್ಲರಿಗೂ ಟಚ್ ಆಗುತ್ತದೆ. ಪುನೀತ್ ಅವರ ಧ್ವನಿಯಲ್ಲೇ ಸಿನಿಮಾ ನೋಡುತ್ತೀರಿ’ ಎಂದು ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ.
ಇನ್ನು ಹಾಡೊಂದಕ್ಕೆ ಜಾನಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಪ್ರಭುದೇವ ಅವರೊಂದಿಗೆ ಪುನೀತ್ ರಾಜಕುಮಾರ್ ಹೆಜ್ಜೆ ಹಾಕಿದ್ದಾರೆ. ಅದರ ಬಗ್ಗೆ ಮಾತನಾಡುವ ನಿರ್ದೇಶಕ ನಾಗೇಂದ್ರ ಪ್ರಸಾದ್, ‘ಪುನೀತ್ ಅವರ ಎಲ್ಲ ಡ್ಯಾನ್ಸ್ ನೋಡಿದ್ದೀನಿ. ಅವರು ಅದ್ಭುತ ಡ್ಯಾನ್ಸರ್. ಡ್ಯಾನ್ಸ್ ಅಂದ್ರೆ ಅಪು್ಪ, ಅಪು್ಪ ಅಂದ್ರೆ ಡ್ಯಾನ್ಸ್. ನಿಮ್ಮ ಜತೆ ಡ್ಯಾನ್ಸ್ ಮಾಡಬೇಕು ಅಂತ ಕೇಳಿದ್ದೆ. ಆದರೆ, ಅದು ನೆರವೇರಲೇ ಇಲ್ಲ’ ಎಂದು ಬೇಸರಿಸಿಕೊಳ್ಳುತ್ತಾರೆ.
ಹಾಗೆಯೇ ಚಿತ್ರ ಇದೇ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುತ್ತಿದ್ದು, ‘ಕನ್ನಡ ಚಿತ್ರರಂಗಕ್ಕೆ ಕಮ್್ಯಾಕ್ ಮಾಡಲು ಪುನೀತ್ ನನಗೆ ಸಹಾಯ ಮಾಡಿದ್ದಾರೆ. ಅವರಿಗೆ ಯಾವಾಗಲೂ ಧನ್ಯ ಎಷ್ಟೇ ಸಮಸ್ಯೆಗಳು ಎದುರಾದರೂ ಅವರ ಆಶೀರ್ವಾದದಿಂದ ಎಲ್ಲವೂ ಬಗೆಹರಿದು ರಿಲೀಸ್ಗೆ ರೆಡಿಯಾ ಗುತ್ತಿದೆ’ ಎಂದು ಹೇಳಿಕೊಳ್ಳುತ್ತಾರೆ.