ಹೊಸಬರ 'ಲವ್ಲಿ' ಚಿತ್ರದ ಆ್ಯಕ್ಷನ್ ಟೀಸರ್​ ಬಿಡುಗಡೆ; ನವೆಂಬರ್​ಗೆ ಚಿತ್ರಮಂದಿರದತ್ತ

Lovely
Published on

ಬೆಂಗಳೂರು: ಚಂದನವನಕ್ಕೆ ಹೊಸ ಪ್ರತಿಭೆಗಳ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಅಂತವರ ಸಾಲಿಗೆ ’ಲವ್ಲಿ’ ಚಿತ್ರ ಸೇರ್ಪಡೆಯಾಗುತ್ತದೆ. ಸದ್ದಿಲ್ಲದೆ ಶೇ. 70 ಚಿತ್ರೀಕರಣ ಮುಗಿಸಿ, ಇದರಲ್ಲಿ ಪ್ರಚಾರದ ಮೊದಲ ಹಂತವಾಗಿ ಆಕ್ಷನ್ ಟೀಸರ್ ಅನ್ನು ಇತ್ತೀಚೆಗೆ ಅನಾವರಣ ಮಾಡಲಾಗಿದೆ.

ಕಲಬುರಗಿ ಜಿಲ್ಲೆ ಜೀವರ್ಗಿ ಮೂಲದ ಪ್ರಸನ್ನ ಪುರಾಣಿಕ್ ಈ ಚಿತ್ರಕ್ಕೆ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಶಿವಗುರು ಫಿಲಂ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಪ್ರೀತಿ, ಕುಟುಂಬದ ಕಥೆಯ ಜತೆಗೆ ಭಾವನೆಗಳು, ಹಾಸ್ಯ, ಸಾಹಸ ಹೀಗೆ ಎಲ್ಲ ತರಹದ ಅಂಶಗಳನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ ಎಂಬುದು ಪ್ರಸನ್ನ ಪುರಾಣಿಕ್ ಮಾತು.


ಬೆಂಗಳೂರಿನ ರೇವತಿ ನಾಯಕಿಯಾಗಿದ್ದು, ಮತ್ತೋರ್ವ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಸಂಜು ಬಸಯ್ಯ, ಇವರೊಂದಿಗೆ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಸಕಲೇಶಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಉಳಿದ ಭಾಗವನ್ನು ವಿಜಯಪುರ, ಹುಬ್ಬಳ್ಳಿಯ ಸುಂದರ ತಾಣಗಳಲ್ಲಿ ಸೆರೆ ಹಿಡಿಯಲು ಯೋಜನೆ ಹಾಕಲಾಗಿದೆ.

ಏಳು ಗೀತೆಗಳಿಗೆ ಸಂಗೀತ ವಿದ್ವಾನ್ ಶಿವಾನಂದ್ ಸಾಲಿಮಠ ರಾಗ ಸಂಯೋಜನೆ, ಛಾಯಾಗ್ರಹಣ ಆಶಿಕ್‌ ಮಂಗಳೂರು, ಸಂಕಲನ ಉಜ್ವಲ್‌ಗೌಡ, ಸಾಹಸ ರವಿಲಿ ಅವರದ್ದಾಗಿದೆ. ಅಂದುಕೊಂಡಂತೆ ಆದರೆ ನವೆಂಬರ್ ವೇಳೆ ಚಿತ್ರ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net